ಮಂಗಳೂರು: ಕಾಂಗ್ರೇಸ್ ಸೇವಾದಳ ವತಿಯಿಂದ ಮಾಜಿ ಸಚಿವರೂ ಹಾಗೂ ಹಾಲಿ ಶಾಸಕರಾದ ಯು ಟಿ ಖಾದರ್ ರವರ ನಿರ್ದೇಶನದಂತೆ ಮಂಗಳೂರು ವಿಧಾನಸಭಾ ಕ್ಷೇತ್ರ ಮಟ್ಟದ, ರಾಷ್ಟ್ರೀಯತೆ ಹಾಗೂ ಸಂವಿಧಾನ ಉಳಿಸುವ, ಧ್ಯೇಯವಾಕ್ಯದೊಂದಿಗೆ ನಡೆದ ಪಥಸಂಚಲನ ತರಬೇತಿ ಕಾರ್ಯಕ್ರಮವು ಐದನೇ ದಿನ ರ ಅಪರಾಹ್ನವು  ಯಶಸ್ವಿಯಾಗಿ,  ಪಿ ಎ ಇಂಜಿನಿಯರಿಂಗ್ ಕಾಲೇಜು ನಡುಪದವು ಸಮೀಪದ  ಕ್ರೀಡಾಂಗಣದಲ್ಲಿ ನಡೆಯಿತು.