ಮಂಗಳೂರು: ಅಧಿಕ ಮಾಸ ಬಹು ಶ್ರೇಷ್ಠ , ಅಧಿಕ ಮಾಸವೆಂದರೆ ಬಹಳ ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಅಧಿಕ ಮಾಸವನ್ನು ಮಲಮಾಸ, ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ. ಭಗವಾನ್ ವಿಷ್ಣುವನ್ನು ಅಧಿಕ ಮಾಸದ ಅಧಿಪತಿಯೆಂದು ಕರೆಯಲಾಗುತ್ತದೆ. ಪುರುಷೋತ್ತಮ ಎನ್ನುವ ಹೆಸರು ಕೂಡ ಭಗವಂತನಾದ ವಿಷ್ಣುವಿನ ಒಂದು ಹೆಸರೇ ಆಗಿದೆ. ಆದ್ದರಿಂದಲೇ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ.
ಕೊಂಚಾಡಿ ಕಾಶಿ ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿ ಗಳನ್ನು ಆಯೋಜಿಸಲಾಗಿದೆ . ಮಹಾಭಾರತ ವನಪರ್ವ , ಸುಮಧ್ವ ವಿಜಯ ಪಾರಾಯಣ , ಪ್ರವಚನ , ನರಸಿಂಹ ಪುರಾಣ ಪಾರಾಯಣ , ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ , ಹರಿವಂಶ ಪಾರಾಯಣ , ಸಂತಾನ ಗೋಪಾಲ ಹವನ , ಶತಚಂಡಿ ಮಹಾ ಯಾಗ , ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ . ಅಧಿಕಮಾಸದ ಪ್ರಥಮದಿನವಾದ ಶುಕ್ರವಾರ ಶ್ರೀ ದೇವಳದ ಯಜ್ಞ ಮಂಟಪದಲ್ಲಿ ಋಗ್ ಸಂಹಿತಾ ಯಾಗ ವು ಪ್ರಾರಂಭಗೊಂಡು ಶ್ರೀಗಳವರ ಅಮೃತ ಹಸ್ತಗಳಿಂದ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮುಖಾಂತರ ವಿಧ್ಯುಕ್ತವಾಗಿ ಯಜ್ಞವು ಪ್ರಾರಂಭಗೊಂಡಿತು . ಬಳಿಕ ವಿವಿಧ ಗೋತ್ರೆಯ ವೈದಿಕರಿಂದ ಯಜ್ಞ ಪ್ರಾರಂಭವಾಯಿತು , ಈ ಯಾಗವು ಏಳು ದಿನಗಳ ಪರ್ಯಂತ ನಡೆಯಲಿದ್ದು ಕೊನೆಯದಿನದಂದು ಶ್ರೀಗಳವರ ದಿವ್ಯಹಸ್ತಗಳಿಂದ ಮಹಾ ಪೂರ್ಣ ಹುತಿ ನಡೆಯಲಿರುವುದು .