ಮಂಗಳೂರು:- 1. ಸರಕಾರ ಘೋಷಣೆ ಮಾಡಿರುವ ಟ್ಯಾಕ್ಸಿ ಚಾಲಕರಿಗೆ ರೂಪಾಯಿ ಐದು ಸಾವಿರ ಹಣವನ್ನು ಎಲ್. ಎಮ್.ವಿ ಬ್ಯಾಡ್ಜ್  ಹೊಂದಿರುವ ಎಲ್ಲ ಚಾಲಕರಿಗೂ ಸಿಗುವಂತೆ ಒತ್ತಾಯಿಸಲಾಗಿದೆ:- 

    ತಮ್ಮ ಸಂಘದಲ್ಲಿ ಸುಮಾರು 2500ಕ್ಕಿಂತಲೂ ಅಧಿಕ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್‌ ವಾಹನಗಳು ಇದ್ದು ಪ್ರಯಾಣಿಕರ ಸಾಗಾಟದಿಂದ ಬರುವ ಆದಾಯದಲ್ಲಿ ಸಂಸಾರವನ್ನು ನಡೆಸುತ್ತಿದ್ದ ಬಡ ಚಾಲಕ ಮಾಲಕರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಂದಂತಹ ಕೋವಿಡ್ -19 ಎಂಬ ರೋಗದಿಂದ ವಿಶ್ವವೇ ನಡುಗಿದಂತೆ  ತಮ್ಮ ಜೀವನದಲ್ಲಿ ಕೂಡ ಪ್ರಭಾವ ಬೀರಿರುತ್ತದೆ. ತಾವುಗಳು ಬಾಡಿಗೆ ಇಲ್ಲದೆ ತುಂಬ ಅಪಾಯದ ಸ್ಥಿತಿಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ  ಟ್ಯಾಕ್ಸಿ ಚಾಲಕರಿಗೆ ರೂ. 5,000/- ಘೋಷಣೆ ಮಾಡಿರುವ ಸರಕಾರ ಸರಿಯಾಗಿ ಇನ್ನೂ ಕೂಡಾ ಹಂಚಿಕೆ ಮಾಡದೆ ಅದರಲ್ಲೂ ಟ್ಯಾಕ್ಸಿಗೆ ಮಾತ್ರ, ಮ್ಯಾಕ್ಸಿ ಕ್ಯಾಬ್ಗೆ ಇಲ್ಲ ಎಂಬ ತಾರತಮ್ಯ ಮಾಡುತ್ತಿದ್ದು ಇವುಗಳನ ಸರಿಪಡಿಸಿ ಎಲ್.ಎಮ್.ವಿ. ಬ್ಯಾಡ್ಜ್ ಹೊಂದಿರುವಂತಹ ಎಲ್ಲಾ ಚಾಲಕರಿಗೆ ಆದಷ್ಟು ಬೇಗನೆ ನೀಡಬೇಕೆಂಬ ಈ ಮೂಲಕ ಒತ್ತಾಯಿಸುತ್ತಿದ್ದಾರೆ. 

2. ಕೋವಿಡ್ 19 ಇದರ ನಿರ್ಮೂಲನೆ ಕಾರ್ಯದಲ್ಲಿ ಭಾಗವಹಿಸಿದ ತಮ್ಮ ಟ್ಯಾಕ್ಸಿ ವಾಹನಗಳಿಗೆ ಹಣವು ಬಿಡುಗಡೆ ಮಾಡದಿರುವ ಬಗ್ಗೆ.

ಇತ್ತೀಚಿಗೆ ಬಂದಂತಹ ಕೋವಿಡ್ 19 ಇದರ ನಿರ್ಮೂಲನೆ ಕಾರ್ಯದಲ್ಲಿದ್ದ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಗಳಿಗೆ ಸಂಚಾರಕ್ಕಾಗಿ ಜಿಲ್ಲಾಡಳಿತ ತಮ್ಮ ಸಂಘದ ಮುಖೇನ ಆರ್.ಟಿ.ಒ. ಇವರ ಸಮ್ಮುಖದಲ್ಲಿ ಸುಮಾರು 150ರಷ್ಟು ವಾಹನಗಳನ್ನು ಜಿಲ್ಲಾದ್ಯಂತ ನೀಡಿದ್ದು, ಇಂದಿಗೆ ಸುಮಾರು ತಿಂಗಳುಗಳು ಕಳೆದರೂ, ತಮ್ಮ ವಾಹನಗಳಿಗೆ ಸರಕಾರದಿಂದ ನೀಡುವ ಗೌರವ ಧನವನ್ನು ಜಿಲ್ಲಾಡಳಿ ಇನ್ನೂ ನೀಡದೆ ಸತಾಯಿಸುತ್ತಿದ್ದು, ಇದರಿಂದ ಕೋರೋನಾ ನಿರ್ಮೂಲನಾ ಆಂದೋಲನಕ್ಕೆ ಸಂಬಂಧಿಸಿ ಕೆಲಸ ಮಾಡಿದ ತಮ್ಮ ಚಾಲಕರು ತುಂಬಾ ತೊಂದರೆಗೊಳಗಾಗಿದ್ದು, ಇದರ ಬಗ್ಗೆ ತಾವು ಹಲವು ಸಲ ಜಿಲ್ಲಾಡಳಿತಕ್ಕೆ ಮನವಿಯನ್ನು ನೀಡಿದ್ದು, ಯಾವುದೇ ಸ್ಪಂದನೆ ದೊರಕದೆ  ತಾವುಗಳು ಕಂಗಾಲಾಗಿದ್ದು ಅದಷ್ಟು ಬೇಗನೆ ಟ್ಯಾಕ್ಸಿ ವಾಹನಗಳ ಹಣವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಬೇಕೆಂದು ತಾವು ಈ ಮೂಲಕ ಒತ್ತಾಯಿಸಿದ್ದಾರೆ. 

3.ಇತ್ತೀಚೆಗೆ ಏರಿಕೆಯಾಗುತ್ತಿರುವ ತೈಲ ದರ ಏರಿಕೆಯ ಬಗ್ಗೆ :- 

ಇತ್ತೀಚಿನ ದಿನಗಳಲ್ಲಿ ಕೋವಿಡ್-19 ರ ಹಾವಳಿಯಿಂದ ತುಂಬಾ ಹದಕೆಟ್ಟಿರುವ ಸಾರಿಗೆ ವಾಹನಗಳ ಮಾಲಕರ ಪರಿಸ್ಥಿತಿ ಈಗ ತೈಲ ಕಂಪನಿಗಳ ತೈಲ ಬೆಲೆ ಏರಿಕೆಯಿಂದಾಗಿ ಸಂಪೂರ್ಣ ಜೀವನವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿರುತ್ತದೆ. ಈ ಬಗ್ಗೆ 2 ಸರಕಾರಗಳು ಬಡವರ ಬಗ್ಗೆ ಕಾಳಜಿ ತೋರಿಸಿ ತೈಲ ಬೆಲೆಯನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾವುಗಳು ಪ್ರತಿಭಟನೆಗಳನ್ನು ನಡೆಸಬೇಕಾಗುತ್ತದೆ ಎಂದು ಈ ಮೂಲಕ ಸರಕಾರವನ್ನು ಎಚ್ಚರಿಸುತ್ತಿದ್ದಾರೆ.

4.ಕೋವಿಡ್ -19ರ ಸಂದರ್ಭ ಬಾಡಿಗೆ ಇಲ್ಲದೆ ಇದ್ದಂತಹ ನಮ್ಮ ಟ್ಯಾಕ್ಸಿ ವಾಹನಗಳಿಗೆ ಬ್ಯಾಂಕ್ ಸಾಲ ಪಾವತಿಗೆ ಒತ್ತಾಯಿಸುವ ಬಗ್ಗೆ:- 

ಕೋವಿಡ್-19 ಸಮಸ್ಯೆಯಿಂದ ತಮ್ಮ ವಾಹನಗಳು ಕಳೆದ 4 ತಿಂಗಳಿಂದ ಮಾರ್ಗಕ್ಕೆ ಇಳಿಯದೇ ಯಾವುದೇ ಬಾಡಿಗೆಯನ್ನು ಮಾಡದ ಪರಿಸ್ಥಿತಿಯಲ್ಲಿದ್ದು, ಆ ಸಂದರ್ಭದಲ್ಲಿ ಆರ್.ಬಿ.ಐ. ಬ್ಯಾಂಕ್ ಒತ್ತಾಯವನ್ನು ಮಾಡುವಂತಿಲ್ಲ. ಅಲ್ಲದೆ ಈ ಸಾಲದ ಕಂತನ್ನು ಬಡ್ಡಿ ರಹಿತವಾಗಿ ಪಡೆದುಕೊಳ್ಳಬೇಕೆಂದು ಸೂಚನೆ ನೀಡಿದ್ದರೂ ಕೆಲವೊಂದು ಬ್ಯಾಂಕ್‌ಗಳು ನಮ್ಮ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ವಾಹನಗಳ ಮಾಲಕರಿಗೆ ಕರೆಯನ್ನು ಮಾಡಿ ಸಾಲ ವಸೂಲಾತಿಗೆ ಒತ್ತಾಯ ಮಾಡುತ್ತಿರುವುದು, ಜೊತೆಗೆ ದಬ್ಬಾಳಿಕೆಯನ್ನು ಕೂಡಾ ನಡೆಸುತ್ತಿದ್ದು ಈ ಬಗ್ಗೆ ಸರಕಾರವು ತಕ್ಷಣ ಎಚ್ಚೆತ್ತುಕೊಂಡು ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಅಧಿಸೂಚನೆಯನ್ನು ನೀಡಬೇಕೆಂದು ನಾವು ಈ ಮೂಲಕ ಕೋರುತ್ತಿದ್ದಾರೆ.

5.ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ವಾಹನಗಳ ತೆರಿಗೆ ಮತ್ತು ವಿಮೆಯನ್ನು 6 ತಿಂಗಳುಗಳ ಕಾಲ ವಿನಾಯತಿ ನೀಡುವ ಬಗ್ಗೆ.

ಕೋವಿಡ್ -19 ರ ಪ್ರಭಾವದಿಂದಾಗಿ ತಮ್ಮ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ವಾಹನಗಳು ಕಳೆದ 4 ತಿಂಗಳುಗಳಿಂದ ರಸ್ತೆಗಿಳಿಯದೆ ಯಾವುದೇ ರೀತಿಯ ಆದಾಯವಿಲ್ಲದೆ ಸಂಸಾರ ನಡೆಸಲು ಪರಿತಪಿಸುತ್ತಿದ್ದು, ಇಂತಹ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ವಾಹನಗಳು ಇನ್ನು 6 ತಿಂಗಳುಗಳ ಕಾಲ ಬಾಡಿಗೆ ಮಾಡುವ ಪರಿಸ್ಥಿತಿ ಇಲ್ಲದಿರುವುದರಿಂದ ಅಂಥಹ ವಾಹನಗಳಿಗೆ ಇನ್ನು 6 ತಿಂಗಳುಗಳ ಕಾಲ ತೆರಿಗೆ ಮತ್ತು ವಿಮೆಯಿಂದ ವಿನಾಯತಿ ನೀಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಬೇಕೆಂದು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.    

 ಆನಂದ್ ಕೆ.  ಪ್ರಧಾನ ಕಾರ್ಯದರ್ಶಿ, ಹರೀಶ್ ಶೆಟ್ಟಿ ಕುತ್ತಾರು ಉಪಾಧ್ಯಕ್ಷರು, ದಿನೇಶ್ ಮಂಗಳಾದೇವಿ  ಉಪಾಧ್ಯಕ್ಷರು, ಸುರೇಶ್ ಸುರತ್ಕಲ್ ಕೋಶಾಧಿಕಾರಿಗಳು ಉಪಸ್ಥಿತರು.