ಮಂಗಳೂರು: “ಸತ್ಯ, ಅಹಿಂಸೆ ಮತ್ತು ತ್ಯಾಗದ ಸಾಕಾರಮೂರ್ತಿಯಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಶಿಲ್ಪಿಯಾಗಿ ಜಗತ್ತಿನ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿದ್ದಾರೆ. ಆದರೆ ಇಂದಿನ ಭಾರತದಲ್ಲಿ ಗಾಂಧಿ ತತ್ವಗಳನ್ನು ಅಳಿಸಿ ಹಾಕಲು ಪ್ರಯತ್ನಗಳು ನಡೆಯುತ್ತಿದ್ದು, ಭಾರತದ ಸಾರ್ವಭೌಮತೆಗೆ ಅಪಾಯದ ಮುನ್ಸೂಚನೆಯಾಗಿದೆ. ಆದ್ದರಿಂದ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಭಾರತದ ಆತ್ಮಶಕ್ತಿಯಾಗಿದೆ”. ಈ ಆದರ್ಶಗಳನ್ನು ಅನುಸರಿಸುವುದೇ ಪ್ರತಿಯೊಬ್ಬ ಭಾರತೀಯನೂ ಗಾಂಧೀಜಿಗೆ ಸಲ್ಲಿಸುವ ಶ್ರೇಷ್ಠ ಗೌರವವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೆ.ಹರೀಶ್ ಕುಮಾರ್ ಹೇಳಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾದ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ದಿನದಂದು ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸುತ್ತಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಪದ್ಮನಾಭ ನರಿಂಗಾನ, ಬಿ.ಎಮ್ ಅಬ್ಬಾಸ್ ಅಲಿ, ಮಲ್ಲಿಕಾ ಪಕ್ಕಳ, ಸುರೇಶ್ ಶೆಟ್ಟಿ, ನಝೀರ್ ಬಜಾಲ್, ನೀರಜ್ ಪಾಲ್, ಸಿ.ಎಮ್ ಮುಸ್ತಫ, ಎಸ್.ಕೆ ಸೌಹಾನ್, ಸಮರ್ಥ್ ಭಟ್, ಶಾಫಿ ಅಹಮದ್ ಜಪ್ಪು, ಶೌನಕ್ ರೈ, ಪವನ್ ಎಸ್.ಕೆ ಉಪಸ್ಥಿತರಿದ್ದರು.