ಮಂಗಳೂರು (ಸೆಪ್ಟೆಂಬರ್ 24):-2020-21ನೇ ಸಾಲಿನಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್, ಬೊಂದೇಲ್, ಮಂಗಳೂರು ಸಂಸ್ಥೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲೀಷ್ ಮತ್ತು ಕನ್ನಡ) ಹಾಗೂ ಲೈಬ್ರೆರಿ ಆ್ಯಂಡ್ ಇನ್‍ಪೋರ್‍ಮೇಶನ್ ಸೈನ್ಸ್ ಕೋರ್ಸ್‍ಗಳ ಪ್ರಥಮ ವರ್ಷದ ಡಿಪ್ಲೋಮ ಪ್ರವೇಶಕ್ಕೆ ಆನ್‍ಲೈನ್ ಪ್ರವೇಶದ ನಂತರ ಖಾಲಿ ಉಳಿದಿರುವ ಸೀಟುಗಳನ್ನು ತುಂಬಲು ಎಸ್.ಎಸ್.ಎಲ್.ಸಿ./ ಪಿ.ಯು.ಸಿ ಉತ್ತೀರ್ಣರಾದ ಹಾಗೂ ಡಿಪ್ಲೋಮ ಕೋರ್ಸ್ ಸೇರಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಂದ ಆಫ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     ಅರ್ಜಿ ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 30 ರಂದು ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು.

        ಹೆಚ್ಚಿನ ಮಾಹಿತಿಯನ್ನು  ಪ್ರಿನ್ಸಿಪಾಲರು, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು, ದೂರವಾಣಿ ಸಂಖ್ಯೆ 0824-2482334 ಹಾಗೂ https;//dtek.karnataka.gov.in  ವೆಬ್‍ಸೈಟ್‍ನಲ್ಲಿ ಪಡೆಯಬಹುದು ಎಂದು ಪ್ರಿನ್ಸಿಪಾಲರ ಪ್ರಕಟಣೆ ತಿಳಿಸಿದೆ.