ಮಂಗಳೂರು : 2019-20ನೇ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡಲಾಗುವ ಬಾಲ ಶಕ್ತಿ ಪುರಸ್ಕಾರ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುವ ಬಾಲ ಕಲ್ಯಾಣ ಪುರಸ್ಕಾರ ಪ್ರಶಸ್ತಿಗಳನ್ನು ನೀಡಲು ಭಾರತ ಸರ್ಕಾರವು ಮಾರ್ಗಸೂಚಿಗಳನ್ವಯ ಸೂಕ್ತ ಪ್ರಸ್ತಾವನೆಗಳನ್ನು ಅರ್ಹ ಮಕ್ಕಳು/ವ್ಯಕ್ತಿ/ಸಂಸ್ಥೆಗಳಿಂದ ಮುಕ್ತ ನಾಮಪತ್ರಗಳನ್ನು “www.nca-wcd.nic.in” ಜಾಲತಾಣದಲ್ಲಿ  ಸಲ್ಲಿsಸುವ ದಿನವನ್ನು ಅಕ್ಟೋಬರ್ 31 ರ ವರೆಗೆ ವಿಸ್ತರಿಸಲಾಗಿದೆ ಎಂದು ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಮಂಗಳೂರು ತಿಳಿಸಿದ್ದಾರೆ.