ಮಂಗಳೂರು (ಜುಲೈ 28 ):- ಕರ್ನಾಟಕ ಸರ್ಕಾರ ಸಕಾಲ ಅಧಿನಿಯಮದಡಿ ಇಲಾಖೆಯ ಯುವ ಸಂಘಗಳ ನೊಂದಣಿ ಸೇವೆಯನ್ನು ಸಕಾಲ ಸೇವೆಯನ್ನಾಗಿ ಈಗಾಗಲೇ ಆನ್‍ಲೈನ್ ಮೂಲಕ ನೀಡಲಾಗುತ್ತಿದೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಂಘಗಳ ಅಧ್ಯಕ್ಷರು/ಕಾರ್ಯದರ್ಶಿಗಳು ತಮ್ಮ ಸಂಘಗಳನ್ನು ಕರ್ನಾಟಕ ಸಂಘ ಸಂಸ್ಥೆಗಳ ನೊಂದಾವಣೆ ಕಾಯಿದೆ 1960ರ ಅಡಿಯಲ್ಲಿ ನೊಂದಾಯಿಸಿಕೊಳ್ಳುವಂತೆ ತಿಳಿಸಿದೆ.
ಈ ಕಾಯಿದೆಯನ್ವಯ ನೊಂದಣಿಯಾದ ಸಂಘಗಳು ನೊಂದಣಿ ಪ್ರಮಾಣ ಪತ್ರದ ಪ್ರತಿ(ಜೆರಾಕ್ಸ್), ಕಾರ್ಯನಿರ್ವಾಹಕ ಸಮಿತಿ ಸದಸ್ಯರ ವಿವರ, ಸದಸ್ಯರ ಹೆಸರು ಮತ್ತು ವಯಸ್ಸಿನ ವಿವರ, ಹಿಂದಿನ ವರ್ಷದ ಸಭೆಯ ನಡವಳಿ ಪ್ರತಿ, ಹಿಂದಿನ ಹಣಕಾಸು ವರ್ಷದ ಲೆಕ್ಕ ಪರಿಶೋಧನಾ ವರದಿ ಇದೆಲ್ಲದರ ಮೇಲೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಹಿ ಮತ್ತು ಮೊಹರಿನ ಪ್ರತಿಯೊಂದಿಗೆ ಇಲಾಖಾ ಮಾನ್ಯತೆ ಪಡೆಯಲು ಸೇವಾ ಸಿಂಧು ಮೂಲಕ ಆನ್‍ಲೈನ್‍ನಲ್ಲಿ ಯುವ ಸಂಘಗಳ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಂಘಗಳು ಈ ಬಗ್ಗೆ ಗಮನಹರಿಸಿ ಕಾರ್ಯನಿರತವಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0824-2451264 ಸಂಪರ್ಕಿಸಲು ದ.ಕ ಜಿಲ್ಲಾಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.