ಮಂಗಳೂರು:- ವಲಸೆ ಕಾರ್ಮಿಕರು ತಮ್ಮ ಊರಿಗೆ ಸಂಚರಿಸಲು ಏರ್ಪಡಿಸಲಾಗಿರುವ ಶ್ರಮಿಕ ಏಕ್ಸ್ ಪ್ರೆಸ್ ರೈಲುಗಳ ಕೊನೆಯ ಸಂಚಾರ ಜೂನ್ ೨೪ ರಂದು ಬೆಂಗಳೂರಿನಿoದ ಹೊರಡಲಿದೆ.

     ಜೂನ್ 24 ರಂದು ಬೆಂಗಳೂರಿನಿoದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಓರಿಸ್ಸಾ, ಅಸ್ಸಾಂ, ಜಾರ್ಖಂಡ್ ಮತ್ತಿತರ ರಾಜ್ಯಗಳಿಗೆ ಬೆಂಗಳೂರನಿoದ ವಲಸೆ ಕಾರ್ಮಿಕರು ಸಂಚರಿಸಲು ಶ್ರಮಿಕ ಎಕ್ಸ್ ಪ್ರೆಸ್ ರೈಲು ಹೊರಡಲಿದೆ.

      ಇದು ವಲಸೆ ಕಾರ್ಮಿಕರಿಗೆ ಕರ್ನಾಟಕದಿಂದ ಹೊರಡುವ ಕೊನೆಯ ರೈಲು ಸಂಚಾರವಾಗಿರುತ್ತದೆ. ಬೆಂಗಳೂರಿನಿoದ ವಲಸೆ ಕಾರ್ಮಿಕರು ಈ ರೈಲುಗಳಲ್ಲಿ ಸಂಚರಿಸಲು ಬೆಂಗಳೂರಿಗೆ ತೆರಳಲು ಮಂಗಳೂರಿನಿoದ ಉಚಿತ ಕೆ.ಎಸ್.ಆರ್.ಟಿ.ಸಿ ಬಸ್ಸ್ ವ್ಯವಸ್ಥೆಯನ್ನು ಜೂನ್ 23 ರಂದು ಏರ್ಪಡಿಸಲಾಗಿದೆ. ಜಿಲ್ಲೆಯಿಂದ ತಮ್ಮ ರಾಜ್ಯಗಳಿಗೆ ತೆರಳುವ ವಲಸೆ ಕಾರ್ಮಿಕರು ಈ ಸೌಲಭ್ಯದ ಪ್ರಯೊಜನ ಪಡೆದುಕೊಳ್ಳಬಹುದು.

   ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವoತೆ  ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.