ಮಂಗಳೂರು: ವಿಧಾನಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿಸೋಜರವರು ಸತತ ಎಂಟನೇ ದಿವಸ ತಮ್ಮ ಮನೆಯ ಗೃಹ ಕಚೇರಿಯಲ್ಲಿ ಸೂಟರ್ ಪೇಟೆ, ಮಜೀಲ ಮತ್ತು ಆಸುಪಾಸಿನ ನಿವಾಸಿಗಳಿಗೆ ಅಕ್ಕಿ ವಿತರಣೆಯನ್ನು ಮಾಡಿದರು, ಕಾರ್ಮಿಕ ವರ್ಗದವರು ಹೆಚ್ಚಿರುವ ಪ್ರದೇಶದಲ್ಲಿ ಜನರಿಗೆ ತಮ್ಮ ದಿನನಿತ್ಯದ ಊಟಕ್ಕೆ ತೊಂದರೆ ಆಗುವುದು ಮನಗಂಡು ಸತತವಾಗಿ 9:00 ಸಮಯದಲ್ಲಿ ಬಂದ ಎಲ್ಲಾ ಆಸುಪಾಸಿನ ಜನರಿಗೆ ಅಕ್ಕಿಯನ್ನು ವಿತರಣೆ ಮಾಡುವ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ, ಈವರೆಗೆ ಸುಮಾರು 3000ಕ್ಕೂ ಅಧಿಕ ಮಂದಿಗೆ ವಿವಿಧ ಹಂತದಲ್ಲಿ ವಿವಿಧ ಕಡೆಗಳಲ್ಲಿ ಕಾಲೋನಿಗಳಿಗೆ ಮತ್ತು ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕರಿಗೆ ಚಾಲಕರಿಗೆ ಬೀಡಿ ಕಾರ್ಮಿಕರಿಗೆ ದಿನಗಳನ್ನು ವಿತರಣೆ ಮಾಡುವ ಮೂಲಕ ಕರೋನವೈರಸ್ ಎದುರಿಸಲು ಮನೆಯಲ್ಲಿ ಕುಳಿತುಕೊಂಡು ದೇಶದ ಇತರ ಜನರ ಒಳಿತಿಗಾಗಿ ದೇಶ ಸೇವೆ ಎಂದೇ ಕರೆಯಲ್ಪಡುವ ಲಾಕ್ ಡೌನ್  ಪಾಲಿಸುತ್ತಿರುವ ಜನರಿಗೆ ಅಭಿನಂದನೆ ಸಲ್ಲಿಸಿ ಈ ಸಂದರ್ಭದಲ್ಲಿ ಕರೋನವೈರಸ್ ಎದುರಿಸಲು ಸಿದ್ಧರಾಗಳು ಅವಶ್ಯಕತೆಯಿದೆಯೆಂದು ತಿಳಿಸಿದರು.