ಮಂಗಳೂರು :- ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾ ಶಾಖೆಯ ವತಿಯಿಂದ ವಿಶ್ವ ತಂಬಾಕು ರಹಿತ ದಿನವನ್ನು ಶನಿವಾರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ “ನಮಗಾಗಿ ಉಗುಳಬೇಡಿ” ಎಂದು ವಿನಂತಿಸುವ ಮಕ್ಕಳೊಂದಿಗಿನ ಪೋಸ್ಟರ್‍ಗಳನ್ನು ಹಾಗೂ ಆಟೋ ರಿಕ್ಷಾಗಳಲ್ಲಿ ಮತ್ತು ಬಸ್‍ಗಳಲ್ಲಿ ಪ್ರದರ್ಶಿಸಲು  “ಉಗುಳುವುದು ಶಿಕ್ಷಾರ್ಹ ಅಪರಾಧ” ಎಂಬ ಸ್ಟಿಕ್ಕರ್‍ಗಳನ್ನು ಅಪರ ಜಿಲ್ಲಾಧಿಕಾರಿ ಎಮ್.ಜೆ ರೂಪಾ  ಬಿಡುಗಡೆ ಮಾಡಿದರು.

       ಅವರು ಮಾತನಾಡಿ,  ದ.ಕ. ರೆಡ್‍ಕ್ರಾಸ್‍ನ ನಿರಂತರ ಪರಿಣಾಮಕಾರಿ ಚಟುವಟಿಕೆಗಳನ್ನು ನೆನೆಯುತ್ತಾ ಕೊರೋನಾ ಸನ್ನಿವೇಶದಲ್ಲಿ ಕೂಡಾ ವಿಶ್ವ ತಂಬಾಕು ರಹಿತ ದಿನವನ್ನು ಅತ್ಯಂತ ಆಕರ್ಷಣೀಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಗುಳುವ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಬಗ್ಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು.

      ಎಲ್ಲಾ ಇಲಾಖೆಗಳು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವವರ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಅದು ಶಿಕ್ಷಾರ್ಹ ಅಪರಾಧವೆಂದು ಕ್ರಮಕೈಗೊಳ್ಳಲು ಸೂಚನೆ ನೀಡುವುದಾಗಿ ತಿಳಿಸಿದರು. ದ.ಕ. ಜಿಲ್ಲಾ ರೆಡ್‍ಕ್ರಾಸ್  ಅಧ್ಯಕ್ಷ ಸಿಎ. ಶಾಂತರಾಮ್ ಶೆಟ್ಟಿ, ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಉಪಸ್ಥಿತರಿದ್ದರು ಎಂದು  ಪ್ರಕಟಣೆ ತಿಳಿಸಿದೆ.