ಕೊಳಲ ರಾಗದಲ್ಲಿ ಹೊಮ್ಮಿದ

ಸ್ವರದ ಮಧುರ ಭಾವ ಯಾರಿಗೋ...

ಬೃಂದಾವನವೇ ಆಲಿಪ

ನಿನಾದ ಯಾವುದೋ....


ಹದಿನಾರು ಸಾವಿರ ಸ್ತ್ರೀಯರಲ್ಲಿ

ಮುದದಿ ಮನವಾವರಿಸಿದವರಾರೋ..

ಮದುರಾನಗರಿ ತುಂಬಿದ ಸಂತಸದಲೆಯ

ಹಿಂದಿರೋ ಮನಸದಾವುದೋ...


ದೈವೀ ಪುರುಷನನ್ನು ಸೆಳೆದ

ಚಲುವು ಯಾರದೋ...

ಅರೆಗಳಿಗೆ ಅಗಲಿರಲಾಗದ

ಮಧುರ ಮೈತ್ರಿಯಾವುದೋ..


ಕೊಳಲ ರಾಗಕು ಕೊರಳ ಬಳಸುವ

ಸಲುಗೆಯಾರದೋ...

ಕಣ್ಣನೋಟದಲ್ಲಿ ಕರಗುವ

ಪ್ರೀತಿಯಾರದೋ....


ತೂಗುಮಂಚದಲ್ಲಿ ಸ್ಥಾನ

ಮಿಸಲಾರಿಗೋ.....

ತುಂಟನಗೆಯಲೆಯಲಿ ಸುಳಿವ

ನೆನಪದ್ಯಾರದೋ...


ಜನ್ಮ ಮರುಜನ್ಮವೆತ್ತಿದರು

ಅಚ್ಚಳಿಯದ ಒಲವದ್ಯಾರದೋ..

ಕೃಷ್ಣನಾಂತರ್ಯದಲ್ಲಿ ಉಳಿದ

ಸುಮಧುರ ಮಿಲನ ರಾಧೇಯದಲ್ಲವೋ....


- By ಪ್ರೀತಿ ಮಾಂತಗೌಡ ಬನ್ನೇಟ್ಟಿ