ಮರೋಳಿ : ಕಾಂಗ್ರೆಸ್ ನಾಯಕರಾದ ದಿ. ಮುಹಮ್ಮದ್ ಬದ್ರುದ್ದೀನ್ ರವರ 4ನೇ ಪುಣ್ಯತಿಥಿ ಅಂಗವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ  ಜೆ.ಆರ್. ಲೋಬೊ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ತಾ  ನಗರದ ಮರೋಳಿ ನಿಡ್ಡೇಲ್ ನಲ್ಲಿರುವ ವೈಟ್ ಡವ್ಸ್ ನಿರಾಶ್ರಿತರ ಕೇಂದ್ರದಲ್ಲಿ ಅಲ್ಲಿ ಆಶ್ರಯಿತರಾಗಿರುವ ನಿರ್ಗರಿಕರ ಜೊತೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕಜೆ.ಆರ್.ಲೋಬೊ ರವರು ಮಾತನಾಡುತ್ತಾ ದಿ. ಮೊಹಮ್ಮದ್ ಬದ್ರುದ್ದೀನ್ ರವರು ಕಾಂಗ್ರೆಸ್ ಪಕ್ಷದಲ್ಲಿ ಬಹಳ ಲವಲವಿಕೆಯಿಂದ ಇದ್ದ ವ್ಯಕ್ತಿಯಾಗಿದ್ದರು. ಜಿಲ್ಲೆಯಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ರಾಜಕಾರಣ ಆರಂಣಿಸಿದವರು. ಅವರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ.ಯನ್ನು ಕಟ್ಟಿ ಬೆಳೆಸಿದವರು. ಅನೇಕ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಎಲ್ಲರ ಮನೆಮಾತಾಗಿದ್ದರು. ಅದಲ್ಲದೇ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವಾ ಸಂಸ್ಥೆಗಳನ್ನು ಹುಟ್ಟು ಹಾಕಿ ಸಮಾಜದಲ್ಲಿರುವ ಬಡವರಿಗೆ ಸಹಾಯ ಮಾಡುತ್ತಿದ್ದರು. ಅವರು ತೀರಿ ಹೋಗಿ ನಾಲ್ಕು ವರ್ಷಗಳಾಗಿವೆ. ಅವರ ನೆನಪಿಗಾಗಿ ಈ ಕಾರ್ಯಕ್ರಮವನ್ನು ನಾವಿಂದು ವೈಟ್ ಡವ್ಸ್ ನಿರಾಶ್ರಿತರ ಕೇಂದ್ರದಲ್ಲಿ ನಾವಿಂದು ಆಚರಿಸಿದ್ದೇವೆ ಎಂದರು. ಸುಮಾರು 175ಕ್ಕೂ ಮಿಕ್ಕಿ ನಿರಾಶ್ರಿತರು ಇಲ್ಲಿ ಆಶ್ರಯಿಸಲಾಗಿದ್ದು ಅವರಿಗೆ ಭೋಜನ ಕೂಟ ವ್ಯವಸ್ಥೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೊರಿನ್ ರಸ್ಕಿನ್ಹಾ, ವೈಟಸ್ ರಸ್ಕಿನ್ಹಾ, ಮಾಜಿ ಮೇಯರ್ ಮಹಾಬಲ ಮಾರ್ಲ, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಫ್ರೀಡಾ ಬದ್ರುದ್ದೀನ್, ಸುಝಾನ ಮುಹಮ್ಮದ್, ಮಾಜಿ ಕಾರ್ಪೊರೇಟರ್ ಗಳಾದ ಪ್ರಕಾಶ್ ಬಿ, ಕೇಶವ ಮರೋಳಿ, ಶೈಲಜಾ, ಸಬಿತಾ ಮಿಸ್ಕಿತ್, ಆಶಾ ಡಿ.ಸಿಲ್ವ, ಪ್ರವೀಣ್ ಆಳ್ವ, ವಿನಯರಾಜ್ ಹಾಗೂ ಪಕ್ಷದ ಮುಖಂಡರುಗಳಾದ ಪ್ರಭಾಕರ ಶ್ರೀಯಾನ್, ಶಾಂತಲಾ ಗಟ್ಟಿ, ಕುಂಞಮು, ಅಶ್ರಫ್, ಡೆನ್ನಿಸ್ ಡಿ.ಸಿಲ್ವ, ಟಿ.ಕೆ. ಸುಧೀರ್, ನೀರಜ್‍ಪಾಲ್, ಶೋಭಾ ಕೇಶವ, ನೆಲ್ಸನ್ ಮೊಂತೆರೋ, ಉದಯ ಕುಂದರ್, ವಿಜಯ ಕುಕ್ಯಾನ್, ಹೆನ್ರಿ ಡಿ.ಸೋಜ ಮೊದಲಾದವರು ಉಪಸ್ಥಿತರಿದ್ದರು.