ಮಳೆ ತಂದ ಭಾಗ್ಯ

ರುದ್ರರಮಣೀಯವಾದ ಕಾಡು. ಅದನ್ನು ಸೀಳಿ ಸಾಗುತ್ತಿರುವ ಟಾರ್ ರಸ್ತೆ. ಆ ರಸ್ತೆಯಲ್ಲಿ ಬೈಕ್ ಏರಿ ಸಾಗುತ್ತಿದ್ದ ಶೇಖರನಿಗೆ ಗಾಳಿಮಳೆ ಆರಂಭವಾದದ್ದೇ ತಿಳಿಯಲಿಲ್ಲ. ಮಳೆಯ ರ‍್ಭಟ ಜೋರಾಗಲು ಬೈಕ್ ನಿಲ್ಲಿಸಿ ತಾತ್ಕಾಲಿಕ ಆಶ್ರಯಕ್ಕಾಗಿ ಸುತ್ತಮುತ್ತಲು ನೋಡಿದ. ಯಾವುದೇ ಕಟ್ಟಡವಾಗಲೀ ಗುಡಿಸಲು ಆಗಲಿ ಅಲ್ಲಿರಲಿಲ್ಲ. ಅವನು ರಸ್ತೆಯ ಮುಂದಕ್ಕೆ ದೃಷ್ಟಿ ಹಾಯಿಸಿದ. ಬಿರುಸು ಮಳೆಯಿಂದಾಗ ರಸ್ತೆ ಮುಂದೆ  ಸ್ವಲ್ಪವೇ   ಸ್ವಲ್ಪ  ದೂರದ ವರೆಗೆ ಕಾಣುತ್ತಿತು.  ಅಲ್ಲಿಂದ ಮುಂದುವರೆದು  ಮಸುಕು ಮಸಕಾಗಿ ಗಗನದೊದಡನೆ ವಿಲೀನಗಡಂತೆ ಕಾಣಿಸುತ್ತಿತ್ತು.

ಆ ಸ್ಥಳದಲ್ಲಿ  ಪೆಂಗ್ವೀನನ್ನು ಹೋಲುವ ಐದು ಆಕೃತಿಗಳು. ಈ ಕಾಡಿನಲ್ಲೂ ಪೆಂಗ್ವಿನ್ ಗಳೇ! ಅವನಿಗೆ ಅಶ್ರ‍್ಯವಾಯಿತು.  ಕುತೂಹಲದಿಂದ ಆ ಮಳೆಯಲ್ಲೂ  ಬೈಕಿನಲ್ಲಿ ಆ ಸ್ಥಳದತ್ತ ಸಾಗಿದ. ಹತ್ತಿರ ಹೋಗುತ್ತಾನೆ. ಅವರೈವರು ತರುಣಿಯರು! ಆ ಮಳೆಯಲ್ಲಿ ಬೆಚ್ಚಗೆ ಗೊರಬೆಯೊಳಗೆ ಸೇರಿಕೊಂಡು ನಡೆಯುತ್ತಿದ್ದರು.

ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಇಲ್ಲಿ ಅಕ್ಜ ಪಕ್ಕ ಯಾವುದಾದರೂ ಮನೆ ಇದೆಯಾ? ಅವನು ಅವರಲ್ಲಿ ಕೇಳಿದ.

ಮುಂದೆ ಹೊಗಿ ಬಲಗಡೆ ಹೋಗಿ ಅಲ್ಲಿ ಒಂದು ನೀಲಿ ತಾರಸಿ ಮನೆಯಿದೆ. ಹೋಗಿ ವಿಚಾರಿಸಿ. ಗೊರಬೆ ತರುಣಿಯರಲ್ಲಿ ಒಬ್ಬಳು ಹೇಳಿದಳು. ಅವನು ಅವಳತ್ತ ನೋಡಿದ. ಎಲ್ಲೋ ನೋಡಿದ ನೆನಪು. ಅದರೆ ನೆನಪಾಗಲಿಲ್ಲ.

ಅವಳೆಂದಂತೆ ಅವನು ಸಾಗಿ ಮನೆ ಮುಂದೆ ತಲುಪಿದ. ಮನೆ ಮುಂದೆ ಬೈಕ್ ನಿಲ್ಲಿಸುತ್ತಿದ್ದಂತೆ. ಮನೆಯಿಂದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಹೊರಬಂದರು. ಶೇಖರ ಎನೋ ಹೇಳಲಿದ್ದ.

ಅಷ್ಟರಲ್ಲಿ ಆ ವ್ಯಕ್ತಿ ಬನ್ನಿ ಬನ್ನಿ ಎಂದು ಉಚಚರಿಸುತ್ತಾ ಒಳಗೆ ಕರೆದೊಯ್ದು

ಒಬ್ಬರೇ ಬಂದಿದ್ದರಲ್ಕಾ ಅಪ್ಪ ಅಮ್ಮ ಎಲ್ಲಿ?

ಎಂದು ಕೇಳಿದರು.

ತನ್ನಂತಹ ಅಪರಿಚಿತನಿಗೆ ಇಂತಹ ಸತ್ಕಾರವೇ ! ಗೊಂದಲದಲ್ಲಿ ಬಿದ್ದನು, ಶೇಖರ.

ನಾನು ಬರುವುದು ನಿಮಗೆ ಗೊತ್ತಿತ್ತೇ. ನನ್ನ ಪರಿಚಯವಿದೆಯೇ?

ಆ ವ್ಯಕ್ತಿಗೆ ಹುಡುಡಿ ನೋಡಲು ಬರುತ್ತಾರೆ ಹೇಳಿದವರಿಗೂ ಇವನಿಗೂ ಸಂಬಂಧವಿಲ್ಲವೆಂದು ಸ್ಪಷ್ಟವಾಯಿತು.

ಹಾಗಾದರೆ ನೀವು ಹುಡುಗಿ ನೋಡಲು ಬಂದವರು ಅಲ್ಲವೇ?

ಅಲ್ಲ. ನಾನು ಕೃಷ್ಣಯ್ಯ ಮಾಷ್ಟರ ಮಗ ಶೇಖರ . ಊರು ಮಂಜೇಶ್ವರ.  ಘಟ್ಟ ನೋಡಲು ಹೊರಟಿದ್ದೆ. ಮಳೆಯಿಂದ ರಕ್ಷಣೆ ಪಡೆಯೋಣ ಅಂತ ಬಂದೆ. ಒದ್ದೋಡಿಸುವುದಾದರೆ ಈಗಲೇ ಓಡಿಸಲಿ ಎಂದು ಶೇಖರ ಒಂದೇ ಉಸಿರಿ ನಲ್ಲಿ ಹೇಳಿಬಿಟ್ಟ.

ಓಹ್!  ಕೃಷ್ಣಯ್ಯ ಮಾಸ್ತರರ ಮಗನೋ ?  ಅಂದಹಾಗೆ ಈಗ ಏನು ಮಾಡಿತ್ತಿದ್ದೀಯ?

ಎಚ್.ಪಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದೀನಿ.

ಸಂಬಳ?

ತಿಂಗಳಿಗೆ ಒಂದು ಲಕ್ಷ

ಮದುವೆ?

ಆಗಿಲ್ಲ. ಅಪ್ಪ ಹೆಣ್ಣು ಹುಡುಕುತ್ತಾ ಇದ್ದಾರೆ.

ನೀವು ಇವತ್ತು ಇಲ್ಲೇ ಇರಬೇಕು. ಈಗ ಇಲ್ಲಿ ವಿಶ್ರಾಂತಿ ತಗೊಳ್ಳಿ. ಎಂದು

ಆ ವ್ಯಕ್ತಿ ಅವನಿಗೊಂದು ಕೋಣೆ ತೋರಿಸಿ ಅಡುಗೆ ಕೋಣೆಯತ್ತಾ ಹೋದರು.

ಶೇಖರನಿಗೆ ಎಲ್ಲವೂ ವಿಚಿತ್ರ ಅನಿಸತೊಡಗಿತು. ಅಪರಿಚಿತನಾದ  ತನ್ನ ಮೇಲೆ ಇಷ್ಟೊಂದು ಕಾಳಜಿ.

ಅಡುಗೆ ಕೋಣೆಯೊಳಗೆ ಆ ವ್ಯಕ್ತಿ ಪಿಸುಗುಟ್ಟುವುದು ಕೇಳಿಸಿತು. ಶೇಖರನ ಕಿವಿ ಚುರುಕಾಯಿತು. ಕಿವಿಗೊಟ್ಟು ಆಲಿಸಿದ.

ಈಗ ಬಂದಿದ್ದಾನಲ್ಲ, ಆ ಹುಡುಗ?

ಹುಂ

ಅವನು ಯಾರು ಗೊತ್ತಾ?

ಗೊತ್ತಿಲ್ಲ

ನಾವು ಮಂಜೇಶ್ವರದಲ್ಲಿರುವಾಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರಲ್ಲ, ಕೃಷ್ಣಯ್ಯ ಮಾಷ್ಟ್ರು.

ಹೌದು ಅವರು ತುಂಬಾ ಕಷ್ಟದಲ್ಲಿದ್ದರು. ನಾವು ಸಕಾಲದಲ್ಲಿ  ಸಹಾಯ ಮಾಡಿರದಿದ್ದರೆ ಏನಾಗುತ್ತಿದ್ದರೋ ಏನೋ?

ಅವರ ಮಗ ಶೇಖರ, ನಾವು ಮಂಜೇಶ್ವರ ಬಿಟ್ಟು ಬರುವಾಗ ಅವನು ಐದನೇ ಕ್ಲಾಸಿನಲ್ಲಿದ್ದ.

ಓಹ್ ಹೌದಾ, ಆಗಲೇ ಹೇಳಬೇಕಿತ್ತಲ್ವಾ. ಹೋಗಿ ಮಾತನಾಡಿಸಿಕೊಂಡು ಬರುತ್ತೀನಿ.

ಸ್ವಲ್ಪತಾಳು, ಮಾತನಾಡಲು ತುಂಬಾ ಇದೆ. ಆ ಮೇಲೆ ಒಟ್ಟಿಗೆ ಮಾತನಾಡೋಣ.

ಅವನು ಸಂಸ್ಕಾರಸ್ತ ಕುಟುಂಬದ ಹುಡುಗ

ಗೊತ್ತು

ಅವನು ಒಳ್ಳೆಯ ಕೆಲಸದಲ್ಲಿದ್ದಾನೆ. ಸುಂದರವಾಗಿದ್ದಾನೆ

ಸರಿ

ಅವನಿಗೆ ಮದುವೆ ಆಗಿಲ್ಲ

ಅಲ್ಲ ಇದನ್ನೆಲ್ಲ ನನಗ್ಯಾಕೆ ಹೇಳ್ತೀರಿ?

ನಮ್ಮ ಮಗಳು ಮದುವೆಯನ್ನು ಅವನೊಂದಿಗೆ...

ಗೊತ್ಯಾಯ್ತು ಬಿಡಿ. ನಿಮಗೆ ಯಾವಾಗಲು ಅದೇ ಚಿಂತೆ. ಅದಕ್ಕೆ ಅವಳು ಒಪ್ಪ ಬೇಕಲ್ಲ.

ಒಪ್ಪದೆ ಏನು? ಒಂದೇ ನೋಟಕ್ಕೆ ಬಿದ್ದು ಬಿಡ್ತಾಳೆ. ಹಾಗಿದೆ ಅವನ ವ್ಯಕ್ತಿತ್ವ.

ಆದರೆ ಅವನು ಒಪ್ಪ ಬೇಕಲ್ಲ

ಅದೆಲ್ಲಾ ದೊಡ್ಡವಿಷಯವಲ್ಲ. ಅವನ ಅಪ್ಪನಿಗೆ ಒಂದು ಮಾತು ಹೇಳಿದರೆ ಇಲ್ಲಾ ಅನ್ನಲ್ಲ.

ಸರಿ. ಅದೆಲ್ಲ ಅವಳು ಬಂದಮೇಲೆ ಮಾತನಾಡೋಣ. ಈಗ ಅವರಿಗೆ ಟೀ ತೆಗೊಂಡು ಹೋಗಿ ಕೊಡಿ.

ಆ ವ್ಯಕ್ತಿ ಈಚೆ ಬರುವುದು ಗಮನಿಸಿ ಶೇಖರ ಸ್ವಸ್ಥಾನದಲ್ಲಿ ಅಸೀನನಾದ.

ಶೇಖರನಿಗೆ ಟಿ ಕೊಟ್ಟ ವ್ಯಕ್ತಿ. ತಾನೀಗ ಬರೀನಿ ಅಂತ ಹೊರಗೆ ಹೋದ.

ಶೇಖರನಿಗೆ ಅವರ ಯೋಜವೆ ಸ್ಪಷ್ಟವಾಗತೊಡಗಿತು. ಹೇಗಾದರೂ ಅಲ್ಲಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸುತ್ತಾ ಸುತ್ತಾ ಮುತ್ತಾ ನೋಡಿದ. ಗೋಡೆಯಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ತೆಗೆದ ಗ್ರೂಪ್  ಪೋಟೊ ನೋಡಿದ. ಅದರಲ್ಲಿ ತಾನು. ಹತ್ತಿರವೇ ಸುಮ. ಅದರ ಪಕ್ಕದಲ್ಲಿ ಇನ್ನೊಂದು ಪೋಟೊ. ಅದು ತನಗೆ ಈ ಮನೆಗೆ ದಾರಿ ತೋರಿಸಿ ಗೊರಬೆ ತರುಣಿಯ ಪೋಟೊ.

ಅಷ್ಟರಲ್ಲಿ ಬಾಗಿಲು ಬಡಿದ ಶಬ್ಧ. ಅಮ್ಮ ಅಮ್ಮ ಎಂದು ಖುಷಿಯಿಂದ  ಕರೆಯುತ್ತಾ ಒಳಬಂದಳು. ಗೊರಬೆ ತರುಣಿ.  

ಶೇಖರ ಅವಕಕ್ಕಾಗಿ ನೋಡುತ್ತಿದ್ದ.


ಮರ‍್ಸೆಲ್ ಡಿ ಸೋಜ

ಕೆ.ಎಚ್.ಬಿ.ಕಾಲೋನಿ,

ಕಾವೂರು, ಮಂಗಳೂರು.