ಉಡುಪಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯವನ್ನು ನೀಡಲು 2018-19ನೇ ಸಾಲಿನಲ್ಲಿ ಕಾಯಕಲ್ಪ ಯೋಜನೆಯನ್ನು ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಆರೋಗ್ಯ ಕೇಂದ್ರ ಪುರಸ್ಕಾರ ಲಭಿಸಿದೆ. ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಪ್ರಕಾಶ್ ಕುಮಾರ್ ಶೆಟ್ಟಿ, ತರಬೇತು ವೈದ್ಯಾಧಿಕಾರಿ ಡಾ| ಜಗದೀಶ ಉಡುಪ, ಫಾರ್ಮಸಿಸ್ಟ್ ಲವೀನಾ, ಕಿರಿಯ ಪುರುಷ ಆರೋಗ್ಯ ಸಹಾಯಕ ವಸಂತ ಶೆಟ್ಟಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯವರಾದ ಎಲ್ಸಿ, ರೇಷ್ಮಾ, ದ್ವಿತೀಯ ದರ್ಜೆ ಸಹಾಯಕ ಉದಯ ನಾಯ್ಕ್, ಶುಶ್ರೂಷಕಿ ಸಂಧ್ಯಾ ನಾಯ್ಕ್, ಗ್ರೂಪ್ ಡಿ ನೌಕರರಾದ ಸಂಜಯ ನಾಯ್ಕ್, ಶಾಲಿನಿ ಪ್ರಶಂಸಾರ್ಹ ಸೇವೆ ಸಲ್ಲಿಸಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.