ಕಾಣುವ ಮಿಥ್ಯವ ಕಂಡು

ಆಗದಿರು ಮರುಳು

ಆದರೆ ನೀನೆ ಬಯಸಿ

ಪಡೆದಂತೆ ನಿನ್ನ ಉರುಳು


ಖಾಲಿ ಆಗಸದಂತೆ

ನಿನಗಿರುವ ಅವಕಾಶ

ಬರೆದುಕೋ ಬರಹವ ಆಗುವ

ಮುನ್ನ ಮೋಡಗಳ ಪ್ರವೇಶ


ತೋರಬೇಡ ಬರಹದಲಿ

ಇನ್ನಿಲ್ಲದ ನೀರಸ

ಹೀಗಾದರೆ ಕಾಣುವುದಿಲ್ಲಾ

ನಿನ್ನ ಇರುವಿಕೆಯ ವಿಳಾಸ


- By ಮಾಗಿದ ಮನಸ್ಸು