ಬಾಳೊಂದು ನಿತ್ಯ ಹಳಿಯ

ಮೇಲೆ ನಡೆವ ರೈಲು

ಕಾಣದಾಗಿದೆ ಆದಿ-ಅಂತ್ಯ

ಹುಡುಕಿದರೂ ಮೈಲು ಮೈಲು


ವಯಸ್ಸಾದಂತೆ ಜೊತೆಗೊಡುವುದು

ಅನುಭವವೆಂಬ ಭೋಗಿಯ ಸಾಲು

ಪಯಣದಿಂ ಮುಕ್ತಿಯ ಪಡೆಯಲು

ನಿಲ್ದಾಣಕ್ಕಾಗಿ ಹಾತೊರೆಯುತ್ತಿದೆ ಕಾಲು


ಹತ್ತಲು ಉಗಿಬಂಡಿ ಖರೀದಿಸಬೇಕು

ನೀನು ಮುಂಗಡ ಟಿಕ್ಕೆಟ್ಟು

ಒಮ್ಮೆ ಪಡೆದ ಮೇಲೆ ಹಣ

ಹಿಂದಿರುಗಿ ಸೇರಲ್ಲಾ ನಿನ್ನ ಪಾಕೆಟ್ಟು


ನಿಲ್ದಾಣದಿಂ ನಿಲ್ದಾಣದೆಡೆಗೆ

ಹೆಚ್ಚಾಗುವುದು ಮೌನದ ಗಂಟು

ಮೌನದೊಳಗಿಹ ಅರ್ಥವ ಹುಡುಕಲು

ಮಾಡಿಲ್ಲಾ ಇನ್ನೂ ನಿಘಂಟು

 

                       -ಮಾಗಿದ ಮನಸ್ಸು