ಮುಂಬಯಿ: ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಸಮಾಜ ಸೇವಕ, ಹೋಟೇಲು ಉದ್ಯಮಿ ಎರ್ಮಾಳು ಹರೀಶ್ ಶೆಟ್ಟಿಯವರನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಪರವಾಗಿ ಅಭಿನಂದಿಸಲಾಯಿತು. ಅಶೋಷಿಯೇಶನಿನ ಬೊರಿವಲಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ರಜಿತ್ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ ಕೋಟ್ಯಾನ್, ಅಸೋಷಿಯೇಶನ್ ನ ಸದಸ್ಯರುಗಳಾದ ಲತೀಶ್ ಪೂಜಾರಿ ಮತ್ತು ಈಶ್ವರ ಎಂ. ಐಲ್ ಉಪಸ್ಥಿತರಿದ್ದರು.