ಬಾಳುವ ಸಮಾಜದಲಿ
ಮೂಡಿದೆ ಕವಲು
ಬಿಕ್ಕುತ್ತಿದೆ ಸದ್ದಿಲ್ಲದೆ
ಬಾಡಿದ ಒಡಲು
ಬದಲಾದ ವಾಸ್ತವಿಕತೆಯೀಗ
ಬಿಡಿಸಲಾಗದ ಒಗಟು
ಬಡಿದಿದೆ ನಾಸಿಕಕ್ಕೆ
ಸುಟ್ಟ ನ್ಯಾಯದ ಕಮಟು
ಸಲಹುವ ಕರವೀಗ
ಮೌನ ದೀಕ್ಷೆಯುಟ್ಟ ಸನ್ಯಾಸಿ
ಯಾರಾಗುವರೀಗ ಕಣ್ಣಂಚಿನಲ್ಲುಳಿದ
ನಿರ್ಭಯ ಬದುಕಿನ ವಿನ್ಯಾಸಿ
-By ಮಾಗಿದ ಮನಸ್ಸು