ಯಡಿಯೂರಪ್ಪರ ರಾಜಕೀಯ ಜೀವನದ ಜಿಲ್ಲೆ ಶಿವಮೊಗ್ಗದಲ್ಲಿ ಕಳೆದ 11 ದಿನಗಳಲ್ಲಿ 61 ಜನ ಕೊರೋನಾದಿಂದ ಸತ್ತಿದ್ದು ಜಿಲ್ಲೆಯ ಜನರನ್ನು ಕಂಗೆಡಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಎರಡನೆಯ ಅಲೆ ನಿಧಾನವಾಗಿ ಬಿರುಸುಗೊಂಡು ಮೇ 2ರಂದು 12, ಮೇ 3ರಂದು 7, ಮೇ 4ರಂದು 15 ಸಾವುಗಳು ಕೊರೋನಾದಿಂದ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾದಿಂದ ಇಲ್ಲಿಯವರೆಗೆ ಆಗಿರುವ ಸಾವುಗಳ ಸಂಖ್ಯೆಯು 420ಕ್ಕೆ ಏರಿಕೆಯಾಗಿದೆ.