ಬಂಟ್ವಾಳ: “ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಲು ಇನ್ನೊಬ್ಬನ ರಕ್ತ ಅನಿವಾರ್ಯವಾಗುತ್ತದೆ. ಆದ್ದರಿಂದ ಇದ್ದನ್ನರಿತು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಪ್ರತಿಫಲಪೇಕ್ಷಯಿಲ್ಲದೆ ನೀಡುವುದಕ್ಕೆ ರಕ್ತದಾನ ಎನ್ನವರು. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ” ಎಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಅನಿತಾ ನುಡಿದರು. ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ಕಾಲೇಜಿನ ರೆಡ್‍ಕ್ರಾಸ್ ಕ್ಲಬ್, ಎನ್. ಎಸ್.ಎಸ್, ಎ£.ïಸಿ.ಸಿ ಇಂಡಿಯನ್ ರೆಡ್‍ಕ್ರಾಸ್ ಸೋಸೈಟಿ, ರೋವರ್ಸ್ ಆಂಡ್ ರೇಂಜರ್ಸ್ ಕ್ಲಬ್ ಮತ್ತು ಕೆ.ಎಮ್.ಸಿ ಆಸ್ಪತ್ರೆಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ| ಪಾಂಡುರಂಗ ನಾಯಕ್ ಮಾತನಾಡುತ್ತ, ನಾವು ನೀಡುವ ರಕ್ತ ಇನ್ನೊಂದು ಜೀವಕ್ಕೆ ವರದಾನ, ರಕ್ತಕ್ಕೆ ವರ್ಷವಿಡೀ ನಿರಂತರ ಬೇಡಿಕೆ ಇರುತ್ತದೆ. ರಕ್ತದಾನ ಮಾಡುವುದರಿಂದ ರಕ್ತದ ಒತ್ತಡ, ಇತರ ಕೆಲವು ರೋಗಗಳು ತಡೆಗಟ್ಟಲು ಸಹಾಯವಾಗುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ರೆಡ್ ರಿಬ್ಬನ್ ಕ್ಲಬ್‍ನ ಅಧ್ಯಕ್ಷ ಕಿಟ್ಟು ರಾಮಕುಂಜ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಯೋಜನಾಧಿಕಾರಿ ಡಾ| ಮಂಜುನಾಥ ಉಡುಪ ಸ್ವಾಗತಿಸಿ, ಎನ್.ಸಿ.ಸಿ ಅಧಿಕಾರಿ ಲೆ| ಸುಂದರ್ ವಂದಿಸಿದರು. ವಿದ್ಯಾರ್ಥಿ ಭರತ್ ಪ್ರಾರ್ಥಿಸಿ, ಎನ್.ಎಸ್.ಎಸ್ ಘಟಕ ನಾಯಕಿ ಸುಸ್ಮಿತಾ ಪೈ ಕಾರ್ಯಕ್ರಮ ನಿರೂಪಿಸಿದರು. ರೆಡ್ ರಿಬ್ಬನ್ ಕ್ಲಬ್‍ನ ಕಾರ್ಯದರ್ಶಿ ಹರಿಕಿರಣ ದ್ವಿತೀಯ ಬಿ.ಎಸ್ಸಿ ಮತ್ತು ಜೊತೆಕಾರ್ಯದರ್ಶಿ ಕು ಶ್ವೇತಾ ಸಹಕರಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳೂ ಸೇರಿದಂತೆ 90 ಜನರು ರಕ್ತದಾನ ಮಾಡಿದರು.