ವಿಟ್ಲ: ತಿಂಗಳ‌ ಹಿಂದೆ ಸಂಘಪರಿವಾರದ ಕಾರ್ಯಕರ್ತನಿಂದ ದೌರ್ಜನ್ಯಕ್ಕೊಳಗಾದ ವಿಟ್ಲ ಕುಡ್ತಮುಗೇರಿನ ಅಪ್ರಾಪ್ತ ಬಾಲಕ ಪ್ರಸಕ್ತ ವಾಸವಾಗಿರುವ ಇರಾ ಗ್ರಾಮದ ಪಂಜಿಕಲ್ಲು ಮನೆಗೆ ಇಂದು ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ಯು.ಟಿ.ಖಾದರವರು ಜನಪ್ರತಿನಿಧಿಗಳೊಂದಿಗೆ ಭೇಟಿ ನೀಡಿ ಕುಟುಂಬಕ್ಕೆ ಸ್ಥೈರ್ಯ ತುಂಬಿದರು.ಘಟನೆಯ ವಿವರ ತಿಳಿದ ತಕ್ಷಣ ಪೋಲಿಸ್ ಉನ್ನತಾಧಿಕಾರಿಗಳಲ್ಲಿ ಮಾತನಾಡಿ ಆರೋಪಿಗಳನ್ನು ಬಂಧಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದೇನೆ, ಬಾಲಕನ ಕುಟುಂಬವು ಯಾವುದೇ ಆತಂಕಕ್ಕೊಳಗಾಗಬಾರದು,ಘಟನೆಯ ಬಗ್ಗೆ ಧರ್ಮದ ಲೇಪನ ಹಚ್ಚದೆ ಶಾಂತಿ ಕಾಪಾಡುವಂತೆ ವಿನಂತಿಸಿದರು. ಎಲ್ಲಾ ಧರ್ಮಗಳಲ್ಲಿರುವ ಬೆರಳೆಣಿಕೆಯ ಕೆಲವರಿಂದಾಗಿ ಸಮಾಜದಲ್ಲಿ ಅಶಾಂತಿಯಾಗುತ್ತಿದ್ದು ಪೋಲಿಸ್ ಇಲಾಖೆಯು ನಿಷ್ಪಕ್ಷಪಾತದಿಂದ ಸಮಾಜ ಘಾತುಕ ಶಕ್ತಿಯನ್ನು ಮಟ್ಟ ಹಾಕುವಂತೆ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಎನ್.ಎಸ್.ಕರೀಮ್, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಕಾಂಗ್ರೆಸ್ ಮುಖಂಡರಾದ ಸಲೀಂ ಉಲ್ಲಾಳ್, ಶೌಕತ್ ಕೋಣಾಜೆ, ಇಬ್ರಾಹಿಮ್ ಮಂಚಿ, ಇಸ್ಮಾಯಿಲ್ ದೊಡ್ಡಮನೆ, ರಫೀಕ್ ಕಲ್ಕಟ್ಟ, ಖಾದರ್ ಕೋಣಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.