ಹುಟ್ಟಿದ , ಬೆಳೆದ, ಹರಡಿದ ಬಗೆಯ ಬಗ್ಗೆ ಕೊರೊನಾ ವಿಷಯದಲ್ಲಿ ಏನೇ ಊಹಾಪೋಹಗಳಿದ್ದರೂ ಕೂಡಾಜನರಲ್ಲಿ ಮೂಡಿದ ಎಚ್ಚರಿಕೆಯನ್ನು, ಜನರು ವಹಿಸಿದ ಜವಾಬ್ದಾರಿಯನ್ನು ನಿಜಕ್ಕೂ ಪ್ರಶಂಸಿಸಬೇಕು. ಇಂತಹ ಜವಾಬ್ದಾರಿಯ ಸಂದರ್ಭದಲ್ಲಿದೇಶದನಮ್ಮಪ್ರಧಾನಿ ಕೊಟ್ಟಕರೆಗೆಇಡೀದೇಶದಜನಒಕ್ಕೊರಲಿನಿಂದ ಬೆಂಬಲವನ್ನು ಸೂಚಿಸಿದರು.ಆದರೆಅಂತಹ ಬೆಂಬಲ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾದದ್ದು ದು:ಖದ ಸಂಗತಿ. ಕನಿಷ್ಠ ಒಂದು ವಾರ ಅಥವಾ ಒಂದು ಪಕ್ಷದಷ್ಟು ದಿನಗಳ ಕಾಲ ಬೆಂಬಲದೊಂದಿಗೆ ದೂರ ದೂರ ಉಳಿಯ ಬೇಕಿದ್ದ ಜನ ಎಲ್ಲವನ್ನೂ ಬಿಟ್ಟು ಕೇವಲ ಒಂದು ದಿನದ ಅಭೂತಪೂರ್ವ ಬೆಂಬಲದ ಮರುದಿನವೇ ಬೀದಿಗಿಳಿದು, ವಾಹನ ಏರಿ, ಕಂಡಕಂಡಲ್ಲಿ ತಿರುಗಾಡಿ, ಸಂಪರ್ಕಿಸ ಹತ್ತಿದರು.

ಇದನ್ನುಕಂಡ ಅಧಿಕಾರದ ಮಂದಿ, ಸರಕಾರಗಳು ಬೇರೆ ಉಪಾಯವಿಲ್ಲದೆ ಸೆಕ್ಷನ್‍ಜಾರಿ, ಲಾಕ್‍ಡೌನ್, ಗಡಿ ಮುಚ್ಚುಗಡೆ, ಎಲ್ಲಾ ವಾಹನ ಬಂದ್‍ಇತ್ಯಾದಿ ನಿಷ್ಠುರ, ಕಠೋರ, ಕ್ರಮಗಳ ಮೂಲಕ ಕಾನೂನಿನ ಮೊರೆ ಹೋಗಬೇಕಾದ ಪ್ರಮೇಯ ಒದಗಿಬಂದಿತು-ಎನ್ನುವುದು ಖೇದಕರ ಮಾತು.ಏನೇ ಇರಲಿ ಇಟೆಲಿ ಇತ್ಯಾದಿ ದೇಶಗಳಲ್ಲಿ ಆದಂತೆ ನಮ್ಮಲ್ಲಿ ಆಗದಂತೆ ಕಾನೂನಿನ ಮೂಲಕವಾದರೂ ತಡೆಯಲು ಕ್ರಮ ಕೈಗೊಂಡ ಎಲ್ಲಾ ರಾಜ್ಯ ಹಾಗೂ ದೇಶದ ಸರಕಾರದ ಮಂದಿಗೆ ಅನಂತಾನಂತ ವಂದನೆಗಳನ್ನು ಹೇಳಲು ದೇಶಪ್ರೇಮಿಗಳು ಮರೆಯುವುದಿಲ್ಲ.

ಪ್ರತ್ಯೇಕವಾಗಿರಿಸುವುದು :ಇಂತಹ ಮಹಾಮಾರಿ ಕೊರೊನಾ ವೈರಸ್ ವಿಪರೀತ ಸೆಖೆಯ, ಬಿಸಿಲಿನ ತಾಪದ ನಾಡಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸರ್ವರೂ ಹೇಳುತ್ತಾರೆ. ಆದರೆ ವಿದೇಶೀಯರ ಆಗಮನದಿಂದ ನಮ್ಮದೇಶದಲ್ಲಿ ಈ ವೈರಸ್ ಬೆಳೆಯಲು, ಪಸರಿಸಲುಆರಂಭವಾಯ್ತು. ವಿದೇಶದಿಂದ ಬಂದಎಲ್ಲಾ ಮಂದಿಯನ್ನೂ ರೋಗದ ಪ್ರಾರಂಭದ ಸಮಯದಿಂದಲೇ ಪ್ರತ್ಯೇಕವಾಗಿ ಇರಿಸಿ ಹದಿನೈದು ದಿನ ಕಾಲ ನಿಗಾದಲ್ಲಿ ಇರಿಸಿದ್ದಲ್ಲಿ ನಮ್ಮದೇಶದಲ್ಲಿ ಈ ವೈರಸ್ ಹರಡಲು ಸಾಧ್ಯವೇಇರುತ್ತಿದ್ದಿಲ್ಲ. ಇರಲಿ. ಮಿಂಚಿಹೋದುದಕ್ಕೆ ಚಿಂತೆ ಏಕೆ?

ಪ್ರತ್ಯೇಕವಾಗಿರಿಸುವುದು ಹೊಸ ಕ್ರಮವೇನೂಅಲ್ಲ. ಹಿಂದೆಲ್ಲಾ ಆಸ್ಪತ್ರೆಗಳು ಬರುವ ಮೊದಲು, ಮನೆಗಳಲ್ಲಿಯೇ ಹೆರಿಗೆಯನ್ನು ಮಾಡಿಸಲಾಗುತ್ತಿತ್ತು.ಅಂತಹ ಹೆರಿಗೆಯ ಸಂದರ್ಭದಲ್ಲಿ ಬಸುರಿಯರಿಗೆ ಹೊಟ್ಟ ನೋವು ಕಾಣಿಸಿದಾಕ್ಷಣ ಹಳ್ಳಿಯಲ್ಲಿರುವ ಸೂಲಗಿತ್ತಿಯರನ್ನು ಕರೆಯಿಸಿ ಹೆರಿಗೆಯನ್ನು ಮಾಡಿಸುತ್ತಿದ್ದರು.ಅಂತಹ ಸಂದರ್ಭದಲ್ಲಿ ಬಸುರಿ-ಬಾಣಂತಿಯನ್ನು ಪಡಸಾಲೆಅಥವಾ ಒಳಕೋಣೆಯಲ್ಲಿ ಅಥವಾ ಹೆಚ್ಚು ಜನತಿರುಗಾಡದಕೋಣೆಯಲ್ಲಿ ಪ್ರತ್ಯೇಕವಾಗಿಇರಿಸಲಾಗುತ್ತಿತ್ತು.ಮತ್ತು ಹನ್ನೊಂದು/ಹದಿನೈದು ದಿನಗಳು/ಒಂದುತಿಂಗಳುಗಳ ಕಾಲ ಮಗುವನ್ನು, ಹಾಗೂ ಬಾಣಂತಿಯನ್ನುಬಹಳ ಜತನದಿಂದ ನೋಡಿಕೊಳ್ಳಲಾಗುತ್ತಿತ್ತು.ಈ ರೀತಿ ಪ್ರತ್ಯೇಕವಾಗಿ ನೋಡಿಕೊಳ್ಳಲು ಕಾರಣ ಮಗುವಿನಂತೆಯೇ ಮಗುವನ್ನು ಹೆತ್ತತಾಯಿ ವಯಸ್ಕಳಾಗಿದ್ದರೂ ಕೂಡಾರೋಗ-ರುಜಿನ, ಖಾಯಿಲೆ-ಕಸಾಲೆಗಳಿಗೆ ಈಡಾಗುವ ಹಸಿ ಮೈಯವಳು ಎಂದು ಪರಿಗಣಿಸಲ್ಪಡುತ್ತಿದ್ದುದು.ಕೆಲವಾರು ವಿಪರೀತಖಾಯಿಲೆಯ ಸಂದರ್ಭದಲ್ಲಿಕೂಡಾರೋಗಸ್ಥರನ್ನುಇದೇರೀತಿ ಮನೆಯಲ್ಲಿಅಥವಾ ಮನೆಯಿಂದದೂರದಲ್ಲಿ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ಹೀಗೆ ಪ್ರತ್ಯೇಕಾಗಿರಿಸುವುದರಿಂದ ಹರಡುವಿಕೆಯನ್ನುತಡೆಗಟ್ಟಲು ಸಾಧ್ಯವಿದೆ ಮಾತ್ರವಲ್ಲಉತ್ತಮರೀತಿಯಆರೈಕೆಯೂ ಸಾಧ್ಯವಿದೆ.

ಬಿಸಿ ನೀರಲ್ಲಿ ಕುದಿಸಿ ಬಟ್ಟೆಒಗೆಯುವುದು: ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷೀನ್ ಬಂದತರು ವಾಯ ಎಲ್ಲರ ಬಟ್ಟೆಯನ್ನೂ ಅದರಲ್ಲಿ ಹಾಕಿ ಒಟ್ಟಿಗೆಒಗೆಯಲಾಗುತ್ತಿದೆ. ಇದು ಇನ್ನೊಂದು ರೀತಿಯಲ್ಲಿ ರೋಗ-ರುಜಿನ ಹರಡಲು ಮೂಲ ಕಾರಣವಾಗಿದೆ. ಹೇಗೆಂದರೆ ಹಿಂದಿನ ಕಾಲದಲ್ಲಿ ಬಾಣಂತಿಯರ, ಚಿಕ್ಕ ಮಕ್ಕಳ, ಖಾಯಿಲೆ ಪೀಡಿತರ ಬಟ್ಟೆಗಳನ್ನು ಕುದಿಯುವ ನೀರಿನಲ್ಲಿ ಅದ್ದಿ ಪ್ರತ್ಯೇಕವಾಗಿ ಒಗೆದು ಬಿಸಿಲಲ್ಲಿ ಒಣ ಹಾಕುತ್ತಿದ್ದರು.ಇದರಿಂದಾಗಿ ಬಟ್ಟೆಯಲ್ಲಿದ್ದ ಕ್ರಿಮಿ-ಕೀಟ-ವೈರಸ್-ಫಂಗಸ್ ಇತ್ಯಾದಿಗಳು ಬಿಸಿ ನೀರಲ್ಲಿ ನಾಶವಾಗುತ್ತಿತ್ತು.ಮತ್ತೂ ಉಳಿದಿದ್ದಲ್ಲಿ ಬಿಸಿಲಿನಲ್ಲಿ ಒಣಗಿಸಲ್ಪಡುವುದರಿಂದ ಸಂಪೂರ್ಣ ನಾಶಗೊಳಿಸಲ್ಪಡುತ್ತಿತ್ತು. ಆದರೆ ಇಂದು ವಾಷಿಂಗ್ ಮಷೀನ್ ನಿಂದಾಗಿ ರೋಗಿಗಳ ಬಟ್ಟೆ ಪ್ರತ್ಯೇಕಗೊಳ್ಳುವುದೂ ಇಲ್ಲ,ಅರೆ ಒಣಗಿದ ಬಟ್ಟೆಗಳು ಪಟ್ಟಣದ ಸ್ಥಳಾಭಾವದಿಂದಾಗಿ ಬಿಸಿಲಿಗೂ ಹಾಕಲ್ಪಡದೇ ಮನೆಯ ಒಳಗೇ ಒಣಗಿಸಲ್ಪಡುವುದರಿಂದ ಮನೆಯಲ್ಲಿರುವ ರೋಗಿಗಳ ಬಟ್ಟೆಯಲ್ಲಿರುವ ವೈರಸ್, ಫಂಗಸ್ ಹಾಗೇ ಉಳಿದು ಇತರರಿಗೂ ರೋಗ ಹರಡಲು ಕಾರಣವಾಗುತ್ತಿದೆ.

ಸಾಮಾನ್ಯವಾಗಿ ನಾವು ಚಿಕ್ಕವರಿರುವಾಗ ಸ್ವಲ್ಪ ಶೀತ, ಜ್ವರ, ಕೆಮ್ಮು, ನೆಗಡಿಯಾದಾಕ್ಷಣ ನಮ್ಮ ಹಿರಿಯರು ನಮ್ಮ ಬಟ್ಟೆಗಳನ್ನು ಪ್ರತ್ಯೇಕವಾಗಿಟ್ಟು ಬಿಸಿ ನೀರಲ್ಲಿ ಕುದಿಸಿ ಪ್ರತ್ಯೇಕವಾಗಿಯೇಒಗೆದು ಬಿಸಿಲಲ್ಲಿ ಒಣಗಾಕುತ್ತಿದ್ದುದು ಈಗಲೂ ನೆನಪಿದೆ. ಅಂತಹಯಾವುದೇ ಪ್ರಕ್ರಿಯೆಯನ್ನು, ಎಚ್ಚರಿಕೆಯ ಕಾರ್ಯಗಳನ್ನು ಈಗಿನ ಮಂದಿ ಮಾಡದೇ ಎಲ್ಲರ ಬಟ್ಟೆಯನ್ನೂಒಟ್ಟಿಗೇ ಹಾಕಿ ಎಲ್ಲರಿಗೂ ರೋಗ ಹರಡುವಂತೆ ಮಾಡುತ್ತಿರುವ ತಿಳಿದವರು, ಕಲಿತವರಿಗೆ ಏನೆನ್ನೋಣ?

ಹುಚ್ಚಾಟ, ಅಪ್ಪಾಟಗಳಿಂದ ದೂರವಿರಿ : ಏನೇ ಆದರೂ ಹಿಂದಿನವರು ಮಾಡಿಕೊಂಡು ಬಂದಕ್ರಮ, ನಿಯಮಗಳನ್ನು ಮತ್ತೊಮ್ಮೆ ನೆನಪಿಸಿದ, ಎಚ್ಚರಿಸಿದ, ಜಾರಿಗೆ ಬರುವಂತೆ ಮಾಡಿದ ಕೊರೊನಾಕ್ಕೆ ಧನ್ಯವಾದ ಹೇಳಲೇಬೇಕು. ಮನುಷ್ಯ ತನ್ನಇತಿ-ಮಿತಿ-ಎಚ್ಚರಿಕೆಯಿಂದ ಜೀವನ ಸಾಗಿಸಬೇಕೆನ್ನುವುದನ್ನು ಕೊರೊನಾ ತಿಳಿಸಿಕೊಟ್ಟಿದೆ.ಅನಗತ್ಯ ತಿರುಗಾಟ, ಹುಚ್ಚಾಟ, ಸಲುಗೆಯಒಡನಾಟ, ಅಪ್ಪುಗೆಯ ಅಪ್ಪಾಟಗಳಿಂದ ದೂರವಿದ್ದು ಒಬ್ಬರುಇನ್ನೊಬ್ಬರಿಂದ ಪ್ರತ್ಯೇಕಾಗಿದ್ದು ಶುದ್ಧ, ಸ್ವಚ್ಛ ಹಸ್ತದಿಂದ ಬದುಕನ್ನು ನಡೆಸಬೇಕೆನ್ನುವುದನ್ನು ತೋರಿಸಿಕೊಟ್ಟಿದೆ.

ಹಲವಾರು ಮಂದಿ ಪಬ್, ಬಾರ್ ಗಳಲ್ಲಿ ಸಿಕ್ಕ ಸಿಕ್ಕವರನ್ನು ಅಪ್ಪಿಕೊಂಡು, ಆಲಿಂಗಿಸಿಕೊಂಡು ನಡೆಸುತ್ತಿದ್ದ ಅಪ್ಪಾಟಗಳು ಕೊರೊನಾದಿಂದಾಗಿ ನಿಂತುಹೋಗಿದೆ. ಕನಿಷ್ಠ ಪಕ್ಷ ಹತ್ತಿರ ಸುಳಿಯಲೂ ಬಿಡದೇ ಎಷ್ಟೇ ಪರಿಚಯವಿದ್ದರೂ ದೂರದಿಂದಲೇ ಮಾತನಾಡಿಸುವ, ಹಲ ಕೆಲವರು ಕೈ, ಬಾಯಿಗಳಿಗೆ ಗ್ಲೌಸ್, ಮಾಸ್ಕ್‍ ಧರಿಸುವ ಮಟ್ಟಿಗೆ ಮುಂದಾಗಿದ್ದಾರೆ. ಅಂತೂ ಎಲ್ಲ ಎಗರಾಟಗಳೂ ತಹಬಂದಿಗೆ ಬಂದಿದೆ. ಎಚ್1ಎನ್1 ಹಾಗೂ ಏಡ್ಸ್ ಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳದ ಮಂದಿ ಅಮೆರಿಕಾದಲ್ಲಿ, ಇಟೆಲಿಯಲ್ಲಿ ಕೊರೊನಾ ಎಚ್ಚರಿಕೆಯನ್ನು ಉಪೇಕ್ಷಿಸಿದವರಿಗೆ ಆದಗತಿಯನ್ನು ಕಂಡು ತಲ್ಲಣಿಸಿ ಹೋಗಿದ್ದಾರೆ. ಅತಿಯಾದರೆ ಎಲ್ಲವೂ ವಿಷ ಎನ್ನುವುದನ್ನು ಇದೀಗ ಹುಚ್ಚಾಟ, ಅಪ್ಪಾಟ ನಟೆಸುತ್ತಿದ್ದ-ಬೀಚ್ ನಲ್ಲಿ ಬೇಕಾಬಿಟ್ಟಿ ಆಡುತ್ತಿದ್ದ ಬೀಚಾಟದ ಮಂದಿಗೆ ಕೊರೊನಾ ತಿಳಿಸಿ ಮನಗಾಣಿಸಿದೆ.

ವಿದೇಶ ಪ್ರೇಮ : ಹಲವಾರು ಮಂದಿಗೆ ಇಂದು ಭಾರತವೇ ಶ್ರೇಷ್ಠ ಎಂದೆಣಿಸಿದೆ. ಏಕೆಂದರೆ ಭಾರತದಲ್ಲಿ ಹೆಚ್ಚಿನ ಎಲ್ಲಾ ಖಾಯಿಲೆ-ಕಸಾಲೆ, ರೋಗ-ರುಜಿನಗಳನ್ನು ತಡೆಯುವ, ಪ್ರಭಾವ ತಗ್ಗಿಸುವ ಆಯುರ್ವೇದೀಯ ಗುಣೌಷಧಗಳಿರುವುದು. ಎಂತಹ ಸಾಂಕ್ರಾಮಿಕ ರೋಗಗಳು ಬಂದರೂ ಇಲ್ಲಿಯ ವಿವಿಧ ಕಷಾಯಗಳು ಪರಿಣಾಮ ನಿಧಾನವಾದರೂ, ರಾಮಬಾಣದಂತೆ ಉಪಯೋಗಕ್ಕೆ ಬರುತ್ತಿದೆ. ಮಾತ್ರವಲ್ಲ ಜನರಲ್ಲಿ ರೋಗವನ್ನು ಬರದಂತೆ ತಡೆಯಲು ಯೋಗ ಇತ್ಯಾದಿಗಳು ಹೆಚ್ಚಿನ ಫಲವನ್ನು ನೀಡಿವೆ. ಸಂಬಾರ ಪದಾರ್ಥಗಳ ಉಪಯೋಗ, ನಿಯಮಿತ ಆಹಾರಕ್ರಮ,ಆರೋಗ್ಯ ಪ್ರದವಾಗಿವೆ,ಎಲ್ಲರನ್ನೂ ಆಕರ್ಷಿಸಿವೆ.

ಭಾರತೀಯಲ್ಲಿ ಬೆಳೆದಿದ್ದ ವಿದೇಶ ಪ್ರೇಮ ಮೇಲ್ಕಂಡ ಹಲವಾರು ಅಂಶಗಳಿಂದ ದೂರವಾಗುತ್ತಿದ್ದು ನಮ್ಮದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಉತ್ತಮ ಅಂಶಗಳಿಂದ,,ಯೋಗ-ಆಯುರ್ವೇದ ಇತ್ಯಾದಿಗಳಿಂದ ದೇಶದ ಮೇಲಿನ ಪ್ರೀತಿ ಬೆಳೆಯುವಂತೆ ಮಾಡಿದೆ. ಹಣದಾಸೆಗೆ ಬಲಿಯಾಗಿ ವಿದೇಶದಲ್ಲಿ ಪ್ರಾಣ ಕಳೆದು ಕೊಂಡವರನ್ನು ನೋಡಿದ ಭಾರತೀಯರು ವಿದೇಶಕ್ಕೆ ಹೋಗುವದನ್ನೇತಿರಸ್ಕರಿಸುತ್ತಿದ್ದಾರೆ. ಹೋದವರೂ ಹಿಂದಕ್ಕೆ ಬರುವ ಮನ ಮಾಡುತ್ತಿದ್ದಾರೆ.ಏಕೆಂದರೆ ಕೊರೊನಾ ಅಷ್ಟು ಪ್ರಭಾವ ಬೀರಿದೆ.

ಭಾರತೀಯರಿಗೆ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ, ರೀತಿ-ನೀತಿ-ಕ್ರಮಗಳಲ್ಲಿರುವ ಉತ್ತಮ ಅಂಶಗಳನ್ನು ತಿಳಿಯುವಂತೆ, ನೆನಪಿಸುವಂತೆ ಕೊರೊನಾ ಮಾಡಿದೆ.ಅದೇ ರೀತಿ ಇರುವ ಸ್ಥಳವನ್ನು ಸ್ವಚ್ಛ-ಸುಂದರವಾಗಿಟ್ಟುಕೊಂಡು ಶುಭ್ರಗೊಳಿಸಿಕೊಳ್ಳಲೂ ಪ್ರೋತ್ಸಾಹಿಸಿದೆ. ಹಾಗೆಯೇ ವಿದೇಶದಿಂದ ಬರುವವರನ್ನು ದೂರವಿರಿಸಿ ರೋಗರಹಿತರೆಂದು ಕಂಡುಕೊಳ್ಳುವಂತೆಯೂ ಎಚ್ಚರಿಸಿದೆ. ಈ ರೀತಿ ಎಚ್ಚರಿಕೆಯ ಗಂಟೆ ಬಾರಿಸಿ ಭಾರತೀಯತೆಗೆ ಪ್ರೇರೇಪಿಸಿದ ಕೊರೊನಾಗೆ ಮತ್ತೊಮ್ಮೆ ಧನ್ಯವಾದಗಳು.

ಲೇಖನ :ರಾಯೀರಾಜಕುಮಾರ್, ಮೂಡುಬಿದಿರೆ- ಸಂಪನ್ಮೂಲ ವ್ಯಕ್ತಿ, ಸಮಾಜಚಿಂತಕರು, ಲೇಖಕರು, 460 ಕ್ಕೂ ಮಿಕ್ಕಿ ವಿವಿಧ ವಿಷಯದ ಕಾರ್ಯಾಗಾರಗಳನ್ನು ರಾಜ್ಯ ಮಟ್ಟದಲ್ಲಿನಡೆಸಿದವರು.