ಹೆಬ್ರಿ : ಜನರ ಸಂಕಷ್ಟಕ್ಕೆ ಸಹಾಯ ಮಾಡುವುದು ಕಾಂಗ್ರೆಸ್ ಮಾತ್ರ. ಕೊರೊನಾ ಮಹಾಮಾರಿಯಲ್ಲಿ ಕಾಂಗ್ರೆಸ್ ದೇಶದಾದ್ಯಂತ ಜನರರೊಂದಿಗೆ ನಿಂತಿದೆ. ಕಾಂಗ್ರೆಸ್ ಏನು ಎಂದು ಈಗ ದೇಶದ ಜನತೆಗೆ ಇನ್ನಷ್ಟು ಅರ್ಥವಾಗಿದೆ. ಮೋದಿ ಮತ್ತು ಯಡಿಯೂರಪ್ಪನವರ ಪರಿಹಾರ ಕೇವಲ ಘೋಷಣೆಗೆ ಸೀಮಿತವಾಗಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ಸಿನ ಕೆಪಿಸಿಸಿ ಉಸ್ತುವಾರಿ ಪರಂಗಿಪೇಟೆಯ ಉಮರ್ ಫಾರೂಕ್ ಹೇಳಿದರು.

ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ಸಿನ ಮುಖಂಡರನ್ನು ಸೋಮವಾರ ಬೇಟಿ ಮಾಡಿ ಬಳಿಕ ಸಭೆ ನಡೆಸಿ ಮಾತನಾಡಿದರು.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡ ಬಳಿಕ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದತ್ತ ಮುಖ ಮಾಡಿದ್ದಾರೆ. ಎಲ್ಲರ ಮುಖದಲ್ಲೂ ಚೈತನ್ಯ ಮೂಡಿದೆ. ಎಲ್ಲರೂ ಸೇರಿ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಮುನ್ನಡೆಸಬೇಕಾಗಿದೆ. ರಾಜೀವ ಗಾಂಧಿಯವರು ಭಾರತಕ್ಕೆ ಪರಿಚಯಿಸಿದ ಮೊಬೈಲ್ ಸಹಿತ ಮಾಹಿತಿ ತಂತ್ರಜ್ಞಾನವನ್ನು ಈಗ ಕಾಂಗ್ರೆಸ್ ಪರಿಣಾಮಕಾರಿಯಾಗಿ ಬಳಸುತ್ತಿದೆ. ಆ ಮೂಲಕ ಡಿಕೆಶಿ ಪದಗ್ರಹಣ ನಡೆಯಲಿದ್ದು 8000 ಕೇಂದ್ರಗಳಲ್ಲಿ ಪದಗ್ರಹಣದ ಲೈವ್ ನಡೆಯಲಿದೆ ಎಂದು ಉಮರ್ ಫಾರೂಕ್ ತಿಳಿಸಿದರು. ಇದು ಯುವಕರಿಗೆ ಇನ್ನಷ್ಟು ಪ್ರೇರಣೆ ನೀಡುತ್ತಿದೆ. ಡಿಕೆಶಿ ಯುವಕರ ಶಕ್ತಿ ಎಂದರು. ಬಿಜೆಪಿಯ ವೈಫಲ್ಯವನ್ನೇ ನಮಗೆ ಬಂಡವಾಳವಾಗಿ ನೀಡಿದ್ದಾರೆ. ನಾವು ಸತ್ಯವನ್ನು ಜನರಿಗೆ ಮುಟ್ಟಿಸಬೇಕು. ಸಾಮಾಜಿಕ ಜಾಲತಾಣವನ್ನು ಎಲ್ಲರೂ ಅತೀ ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ಸಿಗೆ ಕೆಪಿಸಿಸಿಯ ನೂತನ  ಉಸ್ತುವಾರಿಯಾಗಿ ನೇಮಕಗೊಂಡ ಪರಂಗಿಪೇಟೆಯ ಉಮರ್ ಫಾರೂಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಹೆಬ್ರಿಯ ಉಸ್ತುವಾರಿ ಅಣ್ಣಯ್ಯ ಶೇರಿಗಾರ್ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ನೀರೆ ಕೃಷ್ಣ ಶೆಟ್ಟಿ ಹೆಬ್ರಿ,

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಐಟಿಸೆಲ್ ಅಧ್ಯಕ್ಷ ಕನ್ಯಾನ ಸಂತೋಷ ನಾಯಕ್, ಜಿಲ್ಲಾ ಕಾಂಗ್ರೆಸ್ ಐಟಿಸೆಲ್ ಹೆಬ್ರಿ ಉಸ್ತುವಾರಿ ಕಾರ್ಕಳ ವಿಘ್ನೇಶ್ ಕಿಣಿ, ಕಾಂಗ್ರೆಸ್ ಯುವ ಕಾರ್ಯಕರ್ತ ಮುದ್ರಾಡಿ ಪ್ರದೀಪ್ ಆಚಾರ್ಯ, ಪ್ರಕಾಶ್ ಪೂಜಾರಿ ಕೆರ್ವಾಸೆ ಅವರನ್ನು ಸನ್ಮಾನಿಸಲಾಯಿತು.

ಯುವ ಕಾಂಗ್ರೆಸ್ ರಾಜ್ಯಘಟಕದ ಉಪಾಧ್ಯಕ್ಷ ರವಿಶಂಕರ್ ಶೇರಿಗಾರ್, ಮಂಗಳೂರಿನ ಇಮ್ತಿಯಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್ ಆಚಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಜನಾರ್ಧನ್, ಸಂತೋಷ ಕುಮಾರ್ ಶೆಟ್ಟಿ, ಪ್ರಮುಖರಾದ ಶೀನಾ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಲಕ್ಷ್ಮಣ ಆಚಾರ್, ರವಿಪೂಜಾರಿ,ಚಂದ್ರಶೇಖರ ಬಾಯರಿ, ಜಯಕರ ಪೂಜಾರಿ ಮತ್ತಿರರು ಇದ್ದರು.