ಹೊಸದಿಲ್ಲಿ: ಭಾರತದ ಅಗ್ರ ರಾಲಿ ಡ್ರೈವರ್ ಗೌರವ್ ಗಿಲ್ ಮರಳಿ ರಾಲಿ ಟ್ರ್ಯಾಕ್ ಗೆ ಬಂದಿದ್ದು, ಈ ವಾರಾಂತ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಎಫ್ ಎ ಐ ವಿಶ್ವ ರಾಲಿ ಚಾಂಪಿಯನ್ಷಿಪ್ ನ ಅಂತಿಮ ಸುತ್ತು ಆಗಿರುವ ರಾಲಿ ಆಫ್ ಆಸ್ಟ್ರೇಲಿಯಾ ದಲ್ಲಿ ಸ್ಪರ್ಧಿಸಲಿದ್ದಾರೆ.
ಮೂರು ಬಾರಿಎಪಿಆರ್ ಸಿ ಚಾಂಪಿಯನ್ ಹಾಗೂ ಇತ್ತೀಚೆಗೆ ಅರ್ಜುನ ಪ್ರಶಸ್ತಿ ಗೆದ್ದಿರುವ ಗಿಲ್, ಕಳೆದ ವರ್ಷ ನಡೆದ ಡಬ್ಲ್ಯೂ ಆರ್ ಸಿ2 ನಲ್ಲೂ ಪಾಲ್ಗೊಂಡಿದ್ದರು. ಅದೇ ರೀತಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು.
ಭಾರತದಲ್ಲಿ ಜೆಕೆ ಟೈಯರ್ ಅಥ್ಲೀಟ್ ಆಗಿರುವ ಗಿಲ್, ಸಹ ಚಾಲಕ ಮ್ಯಾಕ್ನೆಯಾಲ್ ಗ್ಲೆನ್ ಅವರೊಂದಿಗೆ ಜೆಕೆ ರೇಸಿಂಗ್ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರುವಂತೆ ಮಾಡಿದ್ದಾರೆ. ನೋಂದಾಯಿತ ಚಾಲಕರಾಗಿ ರಾಲಿ ಆಫ್ ಟರ್ಕಿಯಲ್ಲಿ ಪಾಲ್ಗೊಂಡು ತಮ್ಮ ವಿಭಾಗದಲ್ಲಿ ಟಾಪ್ 5 ಸ್ಥಾನ ಪಡೆಯುವ ಗುರಿ ಹೊಂದಿದ್ದರು. ಆದರೆ ಎಲ್ಲಾ ನಾಲ್ಕು ದಿನವೂ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಜಾಗತಿಕ ಮಟ್ಟದಲ್ಲಿ ಮಿಂಚಲು ಅವರಿಗೆ ಸಾಧ್ಯವಾಗಲಿಲ್ಲ. ಅಂತಿಮ ದಿನದಲ್ಲಿ ರಾಲಿ ಮುಗಿಯಲು 5 ಕಿಮೀ ಬಾಕಿ ಇರುವಾಗ ಅವರ ಆರ್ 5 ಡಬ್ಲ್ಯೂಆರ್ ಸಿ ಕಾರಿನ ಗೇರ್ ಬಾಕ್ಸ್ ವಿಅಫಲ್ಯಗೊಂಡಿತು. ಈ ನಡುವೆ ಅವರು ರಾಲಿ ಆಫ್ ವೇಲ್ಸ್ ನಿಂದ ವಂಚಿತರಾದರು. ನವೆಂಬರ್ 14 ರಿಂದ 17ರ ವರೆಗೆ ನಡೆಯಲಿರುವ ಕೆನ್ನಾರ್ಡ್ಸ್ ಹೈರ್ ರಾಲಿ ಆಸ್ಟ್ರೇಲಿಯಾದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.
''ಕೆಲವು ದಿನಗಳಿಂದ ನಾನು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಕಾರಿನ ನಿರ್ವಹಣೆ ಹಾಗೂ ಚಾಸ್ಸಿಸ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಹೊಸ ಕಾರು ನನಗೆ ಖುಷಿಕೊಟ್ಟಿದೆ. ರಾಲಿ ಆರಂಭಿಸಲು ನಾನು ಉತ್ಸುಕನಾಗಿದ್ದೇನೆ. ಈ ಹಿಂದೆಯೂ ನಾನು ಉತ್ತಮ ಸಮಯವನ್ನು ಕಾಯ್ದುಕೊಂಡೊದ್ದೇನೆ. ಈ ಬಾರಿ ಉತ್ತಮ ಪ್ರದರ್ಶನ ತೋರುತ್ತೇನೆಂಬ ಆತ್ಮವಿಶ್ವಾಸ ಇದೆ,'' ಎಂದು ನ್ಯೂ ಸೌತ್ ವೇಲ್ಸ್ ನಲ್ಲಿ ಅಭ್ಯಾಸ ಮುಗಿಸಿದ ನಂತರ ಹೇಳಿದರು.
''ಭಾರತದಲ್ಲಿರುವ ಎಲ್ಲ ರಾಲಿ ಅಭಿಮಾನಿಗಳಿಂದ ಸಿಕ್ಕಿರುವ ಪ್ರೋತ್ಸಹ ಅದೇ ರೀತಿ ಸಾಮಾಜಿಕ ಜಾಲ ತಾಣಗಳಲ್ಲಿ ಉತ್ತಮ ಬೆಂಬಲ ಸಿಕ್ಕೆದೆ,'' ಎಂದರು.
''ಅತ್ಯಂತ ನೆಚ್ಚಿನ ಭೂ ಪ್ರದೇಶದಲ್ಲಿ ಗೌರವ್ ಗಿಲ್ ಪಾಲ್ಗೊಳ್ಳುತ್ತಿರುವುದನ್ನು ಕಾಣುವುದೇ ಸಂಭ್ರಮ,'' ಎಂದು ಜೆಕೆ ಟೈಯರ್ ಮೊಟೊಸ್ಪೋರ್ಟ್ಸ್ ನ ಪ್ರಮುಖ ಸಂಜಯ್ ಶರ್ಮಾ ಹೇಳಿದ್ದಾರೆ. '' ಅವರು ತಮ್ಮ ಶೈಲಿಯಾದ ಆಕ್ರಮಣಕಾರಿಯಾ ಚಾಲನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಾರೆಂಬ ನಂಬಿಕೆ ಇದೆ,'' ಎಂದರು.