ಮೌನವಾಗಿ ಬಿಡಲಾ ಮತ್ತೆ ದನಿ ಕೇಳಲು ಹಂಬಲಿಸುವಂತೆ

ಕಳೆದು ಹೋಗಲಾ ನನ್ನ ನಾ ಹುಡುಕಿದರೂ

ಸಿಗಲಾರದಂತೆ

ಮರೆಯಾಗಿ ಬಿಡಲಾ ಮತ್ತೆ ನೆಪವಾಗಿಯೂ  ನೆನಪಾಗದಂತೆ

ಮಾತು ಮರೆತು ಮರಳಿ ಬಿಡಲಾ ಮತ್ತೆ ತಾಯಿಯ ವಾತ್ಸಲ್ಯದ  ಮೌನ ಭಾಷೆಗೆ...

ಅವಿತು ಕೂತು ಬಿಡಲಾ  ಮತ್ತೆ ಅಮ್ಮನ ಗರ್ಭದೊಳಗೆ..


ಅಂಜಲಿ ಶಿದ್ಲಿಂಗ್