2023-24ನೇ ಸಾಲಿಗೆ ಕೇಂದ್ರ ಸರಕಾರದ ಖೋತಾ ಬಜೆಟ್‌ನ ಅತಿ ಮುಖ್ಯ ಅಂಶ ಎಂದರೆ ಮುಂದಿನ ಹಣಕಾಸು ವರುಷದಲ್ಲಿ 15.4 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯುವುದು. ಇದನ್ನು ಕಳೆದ ಬಜೆಟ್‌ನಲ್ಲಿ ಹೇಳಿದ ಸಾಲಕ್ಕಿಂತ ಹೆಚ್ಚು.

2022-23ನೇ ಸಾಲಿನ ಖೋತಾ ಬಜೆಟ್ ಮಂಡಿಸಿದಾಗ 14.21 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಬಜೆಟ್ ಕೊರತೆ ಸರಿದೂಗಿಸುವುದಾಗಿ ಹೇಳಿದ್ದರು. ಈ ಆರ್ಥಿಕ ವರುಷ ಮಾರ್ಚ್ 31ಕ್ಕೆ ಮುಗಿಯುತ್ತದೆ.

ಅನಂತರದ ಹಣಕಾಸು ವರುಷಕ್ಕೆ ಕೇಂದ್ರ ಸರಕಾರವು ಬಜೆಟ್ ಕೊರತೆ ತುಂಬಲು 15.4 ಲಕ್ಷ ಕೋಟಿ ರೂಪಾಯಿ ಸಾಲ ಮಾಡುವುದಾಗಿ ಹೇಳಿದೆ. ಇದಕ್ಕೆ 11.8 ಲಕ್ಷ ರೂಪಾಯಿಗಳನ್ನು ಭದ್ರತಾ ಬಾಂಡುಗಳ ಮೂಲಕವೇ ಪಡೆಯುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಅಂದರೆ ಮುಂದೆ ಬರುವ ಸರಕಾರ ಬಡ್ಡಿ ಕಟ್ಟುವದಕ್ಕೇ ಬರುವ ಸರಕಾರ ಆಗಿರುತ್ತದೆ.