ಕ್ರೊಯೇಶಿಯಾದ ಜಗ್ರೆಬ್‌ನಲ್ಲಿ ನಡೆಯುತ್ತಿರುವ ಕುಸ್ತಿ ಅಖಾಡದಲ್ಲಿ ಭಾರತದ 17ರ ತರುಣ ಅಮನ್ ಶೆರಾವತ್ ಕಂಚು ಗೆದ್ದರು. ಆ ಹೋರಾಟದಲ್ಲಿ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ರೋಡ್ಸ್‌ರನ್ನು 10-4 ಅಂಕಗಳಿಂದ ಸೋಲಿಸಿದರು. 

ಈ ವಿಭಾಗದ ಚಿನ್ನ ಗೆದ್ದವರು ಅಜರ್‌ಬೈಜಾನ್‌ನ ಆಲಿ ಅಬ್ಬಾಸ್ ರಜಾಜೇದ್. ಫೈನಲ್‌ನಲ್ಲಿ ಸೋತ ಜಪಾನಿನ ಯೂಟೋ ನಿಶಿಯುಚಿ ಬೆಳ್ಳಿ ಕಂಡರು. ಇನ್ನೊಂದು ಕಂಚು ಗೆದ್ದವರು ಜಾರ್ಜಿಯಾದ ಬೆಕಾ ಬುಜಿಯುಶ್ಪಿಲಿ.