ಮೂಡುಬಿದಿರೆ: ಅಕ್ಬೋಬರ್ 10 ರಿಂದ 14ರ ವರೆಗೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಓಡಿಶಾ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಬಾಲಕರು ಹಾಗೂ 07 ಬಾಲಕಿಯರು ಸೇರಿದಂತೆ ಒಟ್ಟು 21 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಂದೇ ಸಂಸ್ಥೆಯಿಂದ 21 ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ.
ಬಾಲಕಿಯರ ವಿಭಾಗ: ಐಶ್ವರ್ಯ (ಚಕ್ರ ಎಸೆತ,), ಗೀತಾ (400 ಮೀ.), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ (ಉದ್ದ ಜಿಗಿತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ (ತ್ರ್ರಯಥ್ಲಾನ್ ಸಿ).
ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಗುರು (ಹೆಪ್ಟಾಥ್ಲಾನ್), ದಯಾನಂದ (400 ಮೀ., 4 *400 ರಿಲೇ), ದರ್ಶನ (5 ಕಿ.ಮೀ ನಡಿಗೆ), ಕವೀಶ್ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್ ಎಸೆತ), ಪ್ರಣವ್ (ತ್ರಯಥ್ಲಾನ್ ಎ), ಸುಭಾಶ್ (ತ್ರಯಥ್ಲಾನ್ ಸಿ). ಯಶವಂತ (800 ಮೀ.), ಆದರ್ಶ್ (ತ್ರಯಥ್ಲಾನ್ ಬಿ).
ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.