ಕೋವಿಡ್ 19 ಒಗಟು ಲೋಕ‌ ಬಿಟ್ಟಿಲ್ಲ. ವೈರಸ್‌ಗಳ ಕಾಟ ನಿಂತಿಲ್ಲ. ಶನಿವಾರದ 24 ಗಂಟೆಗಳಲ್ಲಿ ಲೋಕದಲ್ಲಿ 4.3 ಲಕ್ಷದಷ್ಟು ಹೊಸ ಸೋಂಕಿತರು ಪಾಸಿಟಿವ್ ಪಡೆದರು. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 6.1 ಸಾವಿರದಷ್ಟು ಇತ್ತು. ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು  24,41,05,621ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 49,59,347 ದಾಟಿ ಸಾಗಿದೆ.

ಭಾರತದಲ್ಲಿ ನೋವೆಲ್ ಕೋವಿಡ್ 19 ಈಗ ಸ್ವಲ್ಪ ಹತೋಟಿಗೆ ಬಂದ ಲಕ್ಷಣ ಎಲ್ಲೋ ಇದೆ. ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 16,071 ಮಂದಿ ಪಾಸಿಟಿವ್ ಸಾಂಕ್ರಾಮಿಕ ಎನಿಸಿದರು. ಸೋಂಕಿತರ ಮೊತ್ತವು ಅಲ್ಲಿಗೆ 3,41,74,843ಕ್ಕೆ ಏರಿದೆ. ಶನಿವಾರ ದಿನ ದೇಶದಲ್ಲಿ 397 ನಮ್ಮ ಜನ ಕೊರೋನಾ  ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್‌ಗೆ ಬಲಿಯಾದವರ ಸಂಖ್ಯೆಯು 4,54,301 ದಾಟಿ ಸಾಗಿದೆ.

ರಾಜ್ಯದಲ್ಲಿ ಶನಿವಾರ ಹೊಸದಾಗಿ 371 ಮಂದಿ ಕೊರೋನಾ ಸಾಂಕ್ರಾಮಿಕಕ್ಕೆ ಒಳಗಾದರು. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವ್ ಪಡೆದವರ ಸಂಖ್ಯೆ 29,85,598ಕ್ಕೆ ಏರಿತು. ನಿನ್ನೆ ದಿನ ರಾಜ್ಯದಲ್ಲಿ 7 ಮಂದಿ ಕೊರೋನಾ ಮರಣ ಕಂಡರು. ಇದರೊಂದಿಗೆ ಕರ್ನಾಟಕದಿಂದ ಕೋವಿಡ್‌ಗೆ ಬಲಿ ಹೋದವರ ಸಂಖ್ಯೆಯು 38,002ಕ್ಕೆ ಏರಿತು.

ಶನಿವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮೃತ್ಯು ದಂಡಕ್ಕೆ ಒಬ್ಬರ ಸಾವು ಸಂಭವಿಸಿದೆ. ಒಟ್ಟು ಸಾವಿನ ಮೊತ್ತವು 1,678ರಲ್ಲಿದೆ. ನಿನ್ನೆಯ ದಿನ ದಕದಲ್ಲಿ 34 ಜನ ಹೊಸದಾಗಿ ಸೋಂಕು  ಭಾಜನರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 1,15,252 ದಾಟಿ ಸಾಗಿತು.

ಉಡುಪಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ ಯಾರದೂ ಮರಣ ಸಂಭವಿಸಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಬಲಿ ಪಡೆದವರ ಸಂಖ್ಯೆಯು 489ರಲ್ಲಿದೆ. ಶನಿವಾರ ಪಾಸಿಟಿವ್ ಸಾಂಕ್ರಾಮಿಕ ಎನಿಸಿದವರ ಸಂಖ್ಯೆ 12.  ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆಯು 76,651ಕ್ಕೆ ಏರಿತು.