ಪಂಜಾಬ್ ಗಡಿಯಲ್ಲಿ ಬುಧವಾರ ಬೆಳಗಿನ ಜಾವ ಉಗ್ರರೊಡನೆ ನಡೆದ ಗುಂಡು ವಿನಿಮಯದಲ್ಲಿ ಕರ್ನಾಟಕದ ಬೀದರ್ ಜಿಲ್ಲೆಯ ಯೋಧ 33ರ ಬಸವರಾಜ ಗಣಪತಿ ಮೃತರಾದರು.
ಬೀದರ ಜಿಲ್ಲೆಯ ಔರಾದ ತಾಲೂಕಿನ ಆಲೂರ ಕೆ ಗ್ರಾಮದ ಬಸವರಾಜ ಅವರು ಎಂಟು ವರುಷಗಳಿಂದ ಬಿಎಸ್‌ಎಫ್‌ನಲ್ಲಿ ಇದ್ದಾರೆ. ಎರಡು ವರುಷಗಳ ಹಿಂದೆ ಮದುವೆಯಾಗಿದ್ದಾರೆ. ತಾಯಿ ಇತ್ತೀಚೆಗೆ ಸಾವಿಗೀಡಾಗಿದ್ದಾರೆ. ತಂದೆ ಕೃಷಿಕರು.