ಮಂಗಳವಾರ ಇರುಳು ದಿವಂಗತ ಮಾಜೀ ಕೇಂದ್ರ ಮಂತ್ರಿ ಪಿ. ಆರ್. ಕುಮಾರಮಂಗಲಂ ಅವರ ಪತ್ನಿ 67ರ ಕಿಟ್ಟಿ ಕುಮಾರಮಂಗಲಂ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಶ್ರೀಮತಿ ಕುಮಾರಮಂಗಲಂ ಕೆಲಸ ಮಾಡಿಕೊಡುತ್ತಿದ್ದ ಇಸ್ತ್ರಿ ಮಾಡುವ ವ್ಯಕ್ತಿಯು ಇನ್ನಿಬ್ಬರು ದುಷ್ಕರ್ಮಿಗಳ ಜೊತೆಗೆ ರಾತ್ರಿ ಒಂಬತ್ತು ಗಂಟೆಯ ಹೊತ್ತಿಗೆ ದರೋಡೆ ಮಾಡಲು ಮನೆಗೆ ನುಗ್ಗಿದ್ದಾರೆ. ಕೆಲಸದಾಕೆಯನ್ನು ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.
ಶ್ರೀಮತಿ ಕುಮಾರಮಂಗಲಂ ಕೋಣೆಗೆ ಹೋದಾಗ ಅವರಿಗೆ ಎಚ್ಚರವಾಗಿದೆ. ಆಗ ತಲೆದಿಂಬಿನಿಂದ ಒತ್ತಿ ದುಷ್ಕರ್ಮಿಗಳು ಆಕೆಯನ್ನು ಕೊಂದು ದರೋಡೆ ಮಾಡಿದ್ದಾರೆ ಎಂದು ಪೋಲೀಸರು ಮೊದಲ ಮಾಹಿತಿ ಹೇಳಿದರು. ಒಬ್ಬನನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.