ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಟರಾಗಿದ್ದ ದಿಲೀಪ್ ಕುಮಾರ್ ಅವರು ತನ್ನ 98ರ ಪ್ರಾಯದಲ್ಲಿ ಬುಧವಾರ ಬೆಳಿಗ್ಗೆ ಮುಂಬಯಿಯಲ್ಲಿ ನಿಧನರಾದರು.

ಆರಂಭದಲ್ಲಿ ಹಿಂದಿ ಚಿತ್ರರಂಗದ ಟ್ರಾಜಿಡಿ ಕಿಂಗ್ ಎನಿಸಿದ್ದ ಅವರು ಮುಂದೆ ಎಲ್ಲ ಬಗೆಯ ಪಾತ್ರಗಳಲ್ಲಿ ಹೆಸರು ಮಾಡಿದ್ದರು. ಆನ್, ನಯಾದೌರ್, ಮಧುಮತಿ, ಮೊಗಲ್ ಎ ಅಜಂ, ಶಹೀದ್, ಗಂಗಾ ಜಮುನಾ, ರಾಮ್ ಔರ್ ಶಾಮ್ ಸಹಿತ ಅವರು 65 ಚಿತ್ರಗಳಲ್ಲಿ ನಟಿಸಿದ್ದರು.

ಹಿಂದಿ ಚಿತ್ರರಂಗದ ರೂಪವಂತೆ ಎಂದು ಖ್ಯಾತಿ ಪಡೆದಿದ್ದ ನಟಿ ಸಾಯಿರಾ ಬಾನು ಅವರನ್ನು ದಿಲೀಪ್ 1966ರಲ್ಲಿ ಮದುವೆಯಾಗಿದ್ದರು. ಅವರದ್ದು ಚಿತ್ರರಂಗದ ಅಪರೂಪದ ದಾಂಪತ್ಯ.

1922ರ ಡಿಸೆಂಬರ್ 11ರಂದು ಜನಿಸಿದ ಮೊಹಮದ್ ಯೂಸುಫ್ ಖಾನ್ ಕುಟುಂಬ ಪೂನಾ ಮುಂಬಯಿಗಳಲ್ಲಿ ಒಣ ಹಣ್ಣಿನ ವ್ಯಾಪಾರದಲ್ಲಿ ತೊಡಗಿತ್ತು.

ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪುರಸ್ಕೃತರು ದಿಲೀಪ್ ಕುಮಾರ್.