ಕಷ್ಟ-ಸುಖಗಳ ಕಡಲಾಚೆಯ

ಜೀವನದ ಕಹಿ-ಸಿಹಿಯು ಕಲಿಸುವ

ಪಾಠದಿ ಪರಿಣಿತಿ ಹೊಂದಲು

ಈ ಬೇವು-ಬೆಲ್ಲದ ಸಂಕೇತ


ಬಿಸಿಲೊಳೂ ಬಳಲಿದ ಬಾಳಿಗೆ

ಚಿಗುರಿಹುದೆಂಬ ಆಸೆಯನಿತ್ತು

ಬದುಕಿನ ಗುರಿಗಳ ಮೆಟ್ಟಲು

ಹಿರಿಯರ ಆಶೀರ್ವಾದವೇ ಹಿತ


ಅಳುಕು-ಕೆಡಕುಗಳ ನಡುವೆ

ಅಭ್ಯಂಜನದ ಆಹ್ಲಾದ ಕೊಡುಗೆ

ಆರೋಗ್ಯಕರ ಜೀವನಕ್ಕಾಗಿ

ಈ ಅಡಿಪಾಯ ಬೇಕು ಖಂಡಿತ


ಸಕಲ ಜೀವರಾಶಿಗಳಿಗೂ ಈ ಯುಗಾದಿ ಸುಖವನ್ನು ನೀಡಲಿ, ಕಷ್ಟಗಳನೆದುರಿಸುವ ಶಕ್ತಿ ನೀಡಲೆಂದು ಈ ಪ್ರಕೃತಿಯಲ್ಲಿ ಹರಸುವೆ.

ಹ್ಯಾಪಿ ಯುಗಾದಿ ಟು ಆಲ್

-  ಮಾಗಿದ ಮನಸ್ಸು