ನಿತ್ಯ ನೀರು ಗೊಬ್ಬರ ಕೊಡುವ ಸಾಕು ಗಿಡಗಳು ಬಿಸಿಲಿನ ಪ್ರಕರ ತಾಪಕ್ಕೆ ಬಚ್ಚಿ ಬಸವಳಿದು ಇದನ್ನು ಈ ಪ್ರಮಾಣದಲ್ಲಿ ನೋಡಿದ್ದು ನಾವು ಇದೇ ಮೊದಲು ಹಾಗಿದ್ದರೂ ಏನು ಆರೈಕೆ ಇಲ್ಲದೆ ಬೆಳೆಯುವ ಹಲಸು ಬುಡದಿಂದ ತುದಿ ತನಕ ಗೊಂಚಲು ಗೊಂಚಲಾಗಿ ನೇತಾಡಿದ್ದನ್ನು ನೋಡಿದಾಗಂತೂ ಕಣ್ತುಂಬಿ ಬರುತ್ತದೆ.

ಎಸ್ ಯು ಪಾರ್ವತಿ ಶುಂಠಿ ಮನೆ ವಿರಾಜಪೇಟೆ ಕೂರ್ಗ್ ಇವರ ಕಾಫಿ ತೋಟದಲ್ಲಿ ಈ ಹಲಸಿನ ಮರ ವಿದ್ದು ಜನರು ಮೆಚ್ಚಿಕೊಂಡು ಬಾಯಿ ಚಪ್ಪರಿಸಿಕೊಂಡು ಸವಿಯ ಹಣ್ಣು ಎಂದರೆ ಸಾಕು ಎಲ್ಲರ ಬಾಯಲ್ಲೂ ನೀರು ಇರುವುದು ಸಹಜ ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಹಲಸಿನ ಹಣ್ಣಿನಲ್ಲಿಯೂ ಕೂಡ ವಿಭಿನ್ನ  ತಳಿಗಳಿವೆ.

ಇದೀಗ ಒಂದುವರೆ ವರ್ಷದಲ್ಲಿ ಹಣ್ಣು ಕೊಡುವ ನಿನ್ನ ತಾಯಿ ಹಲಸಿನ ಗಿಡ ಇದು ಹಲಸಿನ ಹಣ್ಣು ಕೊಡುವ ಮರವಲ್ಲ ಗಿಡ ಹಾಗೆಯೇ ವಿಯೆಟ್ನಾಂ ಹಲಸು ,ಚಂದ್ರ  ಬಕ್ಕೆ, ಸೊಂಪಾಡಿ ಹಲಸು ,ರುದ್ರಾಕ್ಷಿ ಹಲಸು, ಗಮ್ ಲೆಸ್ , ಹೀಗೆ ಹಲಸೊಂದು ತಳಿ ನೂರಾರು  ಹಣ್ಣು ಒಂದು ಗುಣ ಹಲವು  ಇದೀಗ  ಕಸಿ ಗಿಡಗಳು  ''ಹಸಿದವನಿಗೆ ಹಲಸು ಉಂಡವನಿಗೆ ಮಾವು" ಎಂಬುದು ನಮ್ಮಲ್ಲಿ ಪ್ರಚಾರದಲ್ಲಿರುವ ಗಾದೆ ಮಾತು ಆದರೆ ಹಲಸಿನ ಮರ ಸಮೃದ್ಧ ಫಲ ನೀಡುವ ಮೂಲಕ ಲಾಭದಾಯಕವಾಗಿದೆ ಹಲಸಿನಹಣ್ಣಿಗೆ ಈಗ ಬಾರಿ ಬೇಡಿಕೆ ಇದೆ ಯಾವುದೇ ಪ್ರದೇಶದಲ್ಲೂ ಹಲಸು ಬೆಳೆಯುತ್ತದೆ. ಇದಕ್ಕೆ ಸ್ವಲ್ಪ ನಿರಾಶಯವಿದ್ದರೂ ಸಾಕು ಹಲಸಿನ ಮರ ಫಲ ಬಿಡುತ್ತದೆ . ಸಸ್ಯಶಾಸ್ತ್ರದಲ್ಲಿ 'ಆಟೋಕಾರ್ಪಾಸ್ ಹೈಟ್ರೋ ಪೈoನ್ಸ್  ' ತಳಿಗೆ ಸೇರಿದೆ ಒಂದು ಬಕ್ಕೆ ಆದರೆ ಇನ್ನೊಂದು ತುಳುವ ಈ ಬಕ್ಕೆ ಹಲಸಿನ ಹಣ್ಣು ಗಟ್ಟಿಯಾದ ಸಿಪ್ಪೆಯನ್ನು ಹೊಂದಿದ್ದು ತುಳುವ ಹಣ್ಣು ಮೆತ್ತ ಮೆತ್ತಗೆ ಹಣ್ಣು ಒಂದು ರೀತಿಯಲ್ಲಿ ನರಸಿಂಹನು  ಹಿರಣ್ಯ ಕಶುಪಿವಿನ ಹೊಟ್ಟೆಯನ್ನು ಬಗೆದಂತೆ ತುಳುವ ಹಲಸಿನ ಹಣ್ಣನ್ನು ಬರಿಯ ಕೈಯಿಂದಲೇ ಬಿಡಿಸಬಹುದು ನಾಲಿಗೆ ಎಂಬುದು ತುಂಬಾ ಅಪಾಯಕಾರಿ ವಿವಿಧ ಬಗೆ ಬಗೆಯ ಸವಿ ಸವಿದು ಹಲಸಿನ ಹಣ್ಣು ಕಾಯಿ ಅದರ ರುಚಿಯ ಬಗ್ಗೆ ಕೇಳಿದರೆ  ಎಲ್ಲಾ ವಾವ್  ಎನ್ನುವವರೇ ಹೆಚ್ಚು ಹಲಸಿನ ಹಣ್ಣಿನ ರುಚಿಯನ್ನು ಯಾರು ಬೇಗ ಮರೆಯಲು ಸಾಧ್ಯವಿಲ್ಲ ಹಾಗೆ ಕೈಯಲ್ಲಿ ಸುವಾಸನೆಯ ಜೊತೆ ಅಂಟು ನಂಟು ತುಂಬಿ ಬಂದು ಹಾಲು ಜೇನ ಹಾಗೆ ಹಲಸಿನ ಹಣ್ಣಿನ ದೋಸೆಗೆ ತುಪ್ಪದ ಕಾಂಬಿನೇಷನ್ ಎಂತವರಿಗೂ ಬಾಯಲ್ಲಿ ನೀರು ಉರಿಸುತ್ತದೆ.

ಹಲಸಿನ ಹಣ್ಣು ಕೇವಲ ರುಚಿಯನ್ನು ಮಾತ್ರ ನೀಡದೆ ದೇಹಕ್ಕೆ ವಿಟಮಿನ್ ಎ ಮತ್ತು ಸಿ ಅನ್ನು ಕೊಡುವುದರೊಂದಿಗೆ ಪೊಟ್ಯಾಷಿಯಂ ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ಸೇರಿದಂತೆ ಇದರಲ್ಲಿ ಅಡಕವಾಗಿದೆ ಈ ಹಣ್ಣಿಗೆ ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ ಕನ್ನಡದಲ್ಲಿ ಹಲಸು ,ತುಳುವಿನಲ್ಲಿ ಗುಜ್ಜೆ, ಸoಸ್ಕೃತದಲ್ಲಿ ಪನಸ್ ,ಇಂಗ್ಲಿಷ್ ನಲ್ಲಿ ಜಾಕ್ ಫ್ರೂಟ್ ಹೀಗೆ ವಿವಿಧ ಹೆಸರಿನಲ್ಲಿ ಕರೆಯುತ್ತಾರೆ. ಹಲಸಿನ ಹಣ್ಣು ಅಪ್ಪಟ ಭಾರತೀಯ ಸಸ್ಯ ಹೋಮ ಹವನಕ್ಕೆ ಇದರ ಚಕ್ಕೆಗಳನ್ನು ಬಳಕೆ ಮಾಡುವುದು ಸಾಮಾನ್ಯ ಹಲಸಿನ ಎಲೆಯಿಂದ ಕೊಟ್ಟೆ ತಯಾರಿಸಿ ಕಡುಬು ಮಾಡುವುದು ಮಲೆನಾಡಿನ ಭಾಗದ ವಿಶೇಷ ಖಾದ್ಯಗಳಲ್ಲಿ ಒಂದು ಐಸ್ ಕ್ರೀಮ್ ಚಾಕಲೇಟ್ ಇಡ್ಲಿ, ಪೋಡಿ ಚಿಪ್ಸ್ ಹಪ್ಪಳ ಬೆರಟಿ ಇದು ತಿಂಡಿಗಳ ಪಟ್ಟಿಯಾದರೆ ಹಲಸಿನಹಣ್ಣಿನ ಬೀಜದಿಂದ ಲೂ ಕಾಫಿ ತಯಾರಿಸುವುದು ಇದೆ ಈ ಕಾಫಿಯು ಮಾಮೂಲಿ ಕಾಫಿ ಅಷ್ಟೇ ರುಚಿಕರವಾಗಿರುತ್ತದೆ ಹೀಗೆ ತಯಾರಿಸುವುದರಿಂದ ಇದಕ್ಕೆ ವಿಶೇಷವಾದ ಗೌರವ ಸ್ಥಾನಮಾನವಿದೆ.

ಹಲಸಿನ ಹಣ್ಣಿನ ಸೇವನೆಯಿಂದ ಆಲ್ಸರ್ ಮೂಳೆ ಸವೆತ ಜೀರ್ಣಕ್ರಿಯೆ ಖನಿಜಾಂಶ ಕೊರತೆಯನ್ನು ಸರಿದೂಗಿಸುತ್ತದೆ ಹಲಸಿನ ಬೆಳೆಯಲ್ಲಿ ಭಾರತವು ಜಗತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದರೆ ಕರ್ನಾಟಕವು ಮೊದಲನೇ ಸ್ಥಾನ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುತ್ತದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ .  ಮಾರ್ಚ್ ನಿಂದ ಸೆಪ್ಟಂಬರ್ ವರೆಗೆ ಫಲ ಬಿಡುತ್ತದೆ ನಮ್ಮ ಹಿರಿಯರು ಹಲಸಿನ ಹಣ್ಣಿನ ಬಗ್ಗೆ ಒಗಟುಗಳನ್ನು ಸಹ ಕಟ್ಟಿದ್ದಾರೆ ಅವು ಹೀಗಿವೆ ಅಡ್ಡ ಮರದಲ್ಲಿ ಬೊಡ್ಡಕುಳಿತಿದ್ದಾನೆ. ನನ್ನ ಅಜ್ಜಿ ಮೈ ಮೇಲೆ ಕಜ್ಜಿ ಹಣ್ಣು ಹಣ್ಣು ಮುದುಕಿ ಮೂಲೆಯಲ್ಲಿ ಕೂತು ಅಳುತ್ತಾಳೆ ಎಂಬ ಒಗಟು ಇನ್ನಷ್ಟು ಪುಷ್ಟಿದಾಯಕವಾಗಿದೆ. ಅತ್ಯಂತ ಬೆಲೆ ಬಾಳುವ ಮರಗಳಲ್ಲಿ ಒಂದಾಗಿದೆ ಇದರಿಂದ ಮನೆಗೆ ಬೇಕಾಗುವ ಪೀಠೋಪಕರಣಗಳನ್ನು ತಯಾರಿಸಿಕೊಳ್ಳಬಹುದು ಅಲ್ಲದೇ ಹಲಸಿನ ಕಾಯಿಯಿಂದ ಪಲ್ಯ , ಮಂಚೂರಿ ಹಣ್ಣಿನಿಂದ ಮುಳ್ಳುಕ್ನ ಸುಟ್ಟಾವು ಗೆಣಸಲೆ, ಹಲ್ವ ಹಲಸಿನ ಹಣ್ಣಿನ ಮಾಡಬಹುದು. ಹೀಗೆ ಅಡುಗೆಯಲ್ಲೂ ಹಲಸಿಗೆ ಗೌರವದ ಸ್ಥಾನಮಾನವಿದೆ ಹಲಸಿನ ಹಣ್ಣಿನ ಘಮಘಮ ಪರಿಮಳ ಇನ್ನಷ್ಟೇ ಆಗಲಿದೆ.

ಬರಹ: ಕುಮಾರ್ ಪೆರ್ನಾಜೆ ಪುತ್ತೂರು