ಅನ್ನದ ಮಹತ್ವ (ಊಟ)...…!

ಊಟವೇ ಆಗಿರಲಿ ಪ್ರೀತಿ ವಾತ್ಸಲ್ಯವೇ ಆಗಿರಲಿ ಎಷ್ಟು ಕೇಳುತ್ತಾರೋ ಅಷ್ಟೇ ಬಡಿಸಬೇಕು ಅತಿಯಾದರೆ ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಮನಸ್ಸಿಗೆ ಆಸೆಗೆ ಮಿತಿ ಇಲ್ಲ ಸಾಗುತ್ತಿರುವ ಜೀವನದಲ್ಲಿ ಒಂದೊಂದು ಆಸೆಗಳು ಕೈಗೂಡಿದಾಗ ಅವುಗಳನ್ನು ಸವಿದು ತೃಪ್ತಿ ಪಡೆದುಕೊಳ್ಳುವುದನ್ನು ಬಿಟ್ಟು ಇನ್ನು ಬೇಕು ಇನ್ನು ಬೇಕೆಂದು ಹೇಳುತ್ತದೆ. ಈ ಮರ್ಕಟ ಮನಸ್ಸು ಮರೀಚಿಕೆಗಳನ್ನು ಬೆನ್ನಟ್ಟಿದರೆ ಕೊನೆಗೆ ನಿರಾಸೆಗಳು  ಏಟಕಲಾರದ  ಕಟ್ಟಿಟ್ಟ ಬುತ್ತಿ ಅದರಿಂದ ಮಾನಸಿಕ ಭ್ರಮೆ ನೀರಸಗಳಿಗೆ ನಾಂದಿ ಮತ್ತು ಜೀವನವಿಡಿ ಅತೃಪ್ತಿಯ ಬೇಗುದಿ.

ಊಟದಲ್ಲಿ ಉಪ್ಪಿಗಿಂತ ರುಚಿಯಿಲ್ಲ  ಜೀವನದಲ್ಲಿ  ತಪ್ಪಿನಂತ ಪಾಠವಿಲ್ಲ ಇಂತಹ ಚಿಕ್ಕ ಚಿಕ್ಕ ಸಂಗತಿಗಳೇ ಸಂತೃಪ್ತಿಯನ್ನು ಸಂತೋಷವನ್ನು ನೀಡುತ್ತದೆ ಇದೀಗ ಎಲ್ಲೆಡೆ ಹಬ್ಬ ಜಾತ್ರೆ ಮದುವೆ,ಮುಂಜಿ ಸಂಭ್ರಮವೇ ಅಂದಾಕ್ಷಣ ಅಲ್ಲಿ ಅನ್ನಪ್ರಸಾದ ಭೋಜನ ಇದ್ದೇ ಇದೆ ಆದರೆ ಇದೀಗ ಬೇಕಾಬಿಟ್ಟಿ ಅನ್ನ ಹಾಕಿಕೊಂಡು ಪೋಲು ಮಾಡುವವರೇ ಜಾಸ್ತಿ ಅನ್ನದ ರೈತನ ಬೆವರಿನ ಬೆಲೆ ತಿಳಿದವರಿಗೆ ಅಷ್ಟೇ ಒಂದೊಂದು ಅಗುಳಿನ ಮಹತ್ವ ತಿಳಿಯುತ್ತದೆ. ಪುತ್ತೂರು ತಾಲೂಕಿನ ಮದ್ಲ ನಿವಾಸಿ ಲಕ್ಷ್ಮೀನಾರಾಯಣ ಭಟ್ ಅವರು ಎಲ್ಲೇ ಊಟ ಮಾಡಿದಾಗ ಅವರ ಬಾಳೆಯಲ್ಲಿ ಊಟವೇ ಮಾಡಲಿಲ್ಲವೇನೋ ಎಂಬಂತೆ ಅಷ್ಟು ತೊಳೆದು ಶುಭ್ರವಾಗಿದ್ದು ಇತರ ಎಲೆಗಳನ್ನು ನೋಡುವಾಗ ಇಷ್ಟು ಪೋಲಾಗುತ್ತದೆ ನೀವೇ ನೋಡಿ. ತನ್ನ ಹೊಟ್ಟೆಯ ಅಳತೆಯನ್ನು ನೋಡಿ ಬೇಕಾದಷ್ಟೇ ಹಾಕಿ ಪೋಲು ಮಾಡಬೇಡಿರೆಂದು ಕಿವಿಮಾತು ಹೇಳುತ್ತಾರೆ. ಹಾಕಿಕೊಂಡು ಬಿಸಾಡದೆ ಪಾತ್ರೆಯಲ್ಲೇ ಇರಲಿ, ಇನ್ನೊಬ್ಬರಿಗೆ ಆಗುತ್ತೆ.

ತಿಂದು ತೆಗುತ ತಿನ್ನುವ ಅನ್ನವ ತಿಪ್ಪೆಗೆ ಎಸೆಯುವವರು ಒಂದು ಹೊತ್ತಿನ ತುತ್ತು ಕೋಳಿಗೂ ತಿಪ್ಪೆ ಹುಡುಕುವವರು ಆಸರೆ ಅವರಿಗಿಲ್ಲ ಭರವಸೆ ನೀಡುವವರು ಇಲ್ಲ ಬಟ್ಟೆ ಇದ್ದರು ಮಾನ ಮುಚ್ಚಲು ಬಟ್ಟೆ ಇಲ್ಲದೆ ಬೀದಿ ಬೀದಿ ಅಳೆಯುವವರು ಇದ್ದಾರೆ ಆನೆಯ ಬಾಯಿಯಿಂದ ಬಿದ್ದ ಕಾಳು ಆನೆಗೆ ಬಹಳ ಚಿಕ್ಕದಿರಬಹುದು ಆದರೆ ಅದು ಇರುವೆಗೆ ಒಂದೆರಡು ದಿನದ ಆಹಾರವಾಗಬಹುದು ನೀವು ಬೇಡವೆಂದು ಏನು ಎಸೆದಿದ್ದು ಬೇರೆಯವರಿಗೆ ಉಪಯೋಗಕ್ಕೆ ಬರಬಹುದು ಹಂಚಿಕೊಳ್ಳುವುದರಲ್ಲಿಯೂ ಸಂತಸ ಬೇರೆ ಯಾವುದರಲ್ಲಿಯೂ ಇಲ್ಲ ವಿವಾಹ ಭೋಜನವಿದು ವಿಚಿತ್ರ ಭಕ್ಷಗಳಿವು ಆಹಹಹಹ...ಹ.! ಬೀಗರಿಗೆ ಔತಣವಿದು..

ಬರಹ: ಕುಮಾರ್ ಪೆರ್ನಾಜೆ ಪುತ್ತೂರು