ಉಡುಪಿ, ಅಕ್ಟೋಬರ್ 26: ಅಕ್ಟೋಬರ್ 28ರಂದು ಬೆಳಗ್ಗೆ 11 ಗಂಟೆಗೆ   ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ಹಾಡಲು ಎಲ್ಲಾ ಅಗತ್ಯ  ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದರು.

ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ  ನಡೆಸಿ ಸೂಚನೆಗಳನ್ನು ನೀಡಿದರು.

ಎಲ್ಲಾ ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಸಚಿವರು, ಇದನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾತ್ರ  ನಡೆಸದೇ ಎಲ್ಲಾ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭೂತಪೂರ್ವವಾಗಿ ಆಯೋಜಿಸಿ, ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ಸಹ ವೀಕ್ಷಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ, ಕಾರ್ಯಕ್ರಮದ ಸಂಪೂರ್ಣ ವೀಡಿಯೋ ಚಿತ್ರೀಕರಣ, ಡ್ರೋಣ್ ಚಿತ್ರೀಕರಣ, ಕಾರ್ಯಕ್ರಮದಲ್ಲಿ ಭಾಗವಹಿಸದ ಜನಸಂಖ್ಯೆಯ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ದಾಖಲೀಕರಣ ಮಾಡುವಂತೆ ಸೂಚಿಸಿದರು.

ಕಾರ್ಯಕ್ರಮ ಆಯೋಜಿಸುವಾಗ ಆರಂಭದಲ್ಲಿ ಯಾವುದೇ ಭಾಷಣ ಕಾರ್ಯಕ್ರಮ ಮಾಡಬೇಡಿ, 10.45 ಕ್ಕೆ ನಿಗಧಿತ ಜಾಗದಲ್ಲಿ ಸಮಾಪನಗೊಂಡು , ಸರಿಯಾಗಿ  11 ಗಂಟೆಗೆ ಹಾಡಲು ಆರಂಭಿಸಬೇಕು, ಈ 3 ಗೀತೆಗಳ ಜೊತೆಗೆ ಕನ್ನಡ ನಾಡು ನುಡಿಯ ಮಹತ್ವ ಇರುವ ಇತರೆ  ಗೀತೆಗಳನ್ನು ಹಾಡಬಹುದಾಗಿದ್ದು, ಕೊನೆಯಲ್ಲಿ ಕನ್ನಡದ ಬಳಕೆ ಕುರಿತು ಸಂಕಲ್ಪ ಮಾಡಬೇಕು ಎಂದು ಸಚಿವರು ಹೇಳಿದರು.

ವಿಮಾನ ನಿಲ್ದಾಣ ಮುಂಭಾಗ, ಮೆಟ್ರೋದಲ್ಲಿ, ಆಟೋ ರಿಕ್ಷಾ ಸಂಘಗಳಲ್ಲಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ , ಮಾಲ್ಗಳಲ್ಲಿ, ವಸತಿ ಸಮುಚ್ಛಯಗಳಲ್ಲಿ , ರಾಜ್ಯದ  ಗಡಿ ನಾಡ ಜಿಲ್ಲೆಗಳಲ್ಲಿ  ಮತ್ತು ಗಡಿ ಭಾಗದಲ್ಲಿ ವಿಶೇಷವಾಗಿ ಕಾರ್ಯಕ್ರಮಗಳನ್ನು  ಆಯೋಜಿಸುವಂತೆ  ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಮಠದ ಮುಂಭಾಗ, ಮಲ್ಪೆ ಸೀ ವಾಕ್ , ಮಲ್ಪೆ ಸಮುದ್ರದಲ್ಲಿ  ದೋಣಿಯಲ್ಲಿ, ಕಾಪು ಲೈಟ್ ಹೌಸ್, ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್, ಕೊಲ್ಲೂರು ದೇವಾಲಯ ಮುಂಭಾಗ, ಕಾರ್ಕಳ ಗೊಮ್ಮಟ ಬೆಟ್ಟದ ಬಳಿ ಸೇರಿದಂತೆ  ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು, ಕೈಗಾರಿಕೆಗಳು,  ವೈದ್ಯಕೀಯ ಮತ್ತು ಇಂಜಿನಿಯರಿAಗ್ ಕಾಲೇಜಿನಲ್ಲಿ ಹಾಗೂ ಎಲ್ಲಾ  ಪಂಚಾಯತ್ಗಳು, ಜಿಲ್ಲೆಯಲ್ಲಿರುವ ರಾಷ್ಟಿçÃಕೃತ ಬ್ಯಾಂಕ್ಗಳ ಪ್ರಾದೇಶಿಕ ಕಚೇರಿಗಳಲ್ಲಿ,  ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಸಹ  ಕಾರ್ಯಕ್ರಮ ಆಯೋಜಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.