ದಿಲ್ಲಿ ಮಹಾನಗರ ಪಾಲಿಕೆಯ 250 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮುಗಿದಿದ್ದು, ಆಮ್ ಆದ್ಮಿ ಪಕ್ಷವು ಸ್ಪಷ್ಟವಾಗಿ ಬಿಜೆಪಿಯ 15 ವರುಷಗಳ ಆಡಳಿತವನ್ನು ಕೊನೆಗೊಳಿಸಿದೆ. ಎಎಪಿಯು 134 ಕಡೆ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಬಿಜೆಪಿಯು 104 ಕಡೆ ಜಯ ಗಳಿಸಿದೆ.

ಕಾಂಗ್ರೆಸ್ ಮೂರನೆಯ ಸ್ಥಾನದಲ್ಲಿದ್ದರೂ ಬಹು ದೂರದಲ್ಲಿದೆ. ಅದು ಎರಡಂಕಿ‌ ಮುಟ್ಟದೆ 9 ಸ್ಥಾನ ಮಾತ್ರ ಗೆದ್ದಿದೆ. ಮೂರು ಕಡೆ ಇತರರು ಗೆದ್ದಿದ್ದಾರೆ. ಬಿಜೆಪಿಯ ದುರಾಡಳಿತಕ್ಕೆ ಕೊನೆ ಎಂದರೂ ಇದು ನಮ್ಮ ಮೇಲೆ ಬಿದ್ದಿರುವ ದೊಡ್ಡ ಹೊರೆ ಎಂದು  ದಿಲ್ಲಿಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದ ಉಪ ಮುಖ್ಯಮಂತ್ರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದರು.