ಉಡುಪಿ: ಆಮ್ ಆದ್ಮಿ ಉಡುಪಿ ಜಿಲ್ಲೆಯ ಪಕ್ಷದ ವತಿಯಿಂದ ಉಡುಪಿ ಅಂಬಲಪಾಡಿಯಲ್ಲಿರುವ ಕುಟೀರ  ಹಿರಿಯರ ಆರೈಕೆ ಕೇಂದ್ರಕ್ಕೆ  ಭೇಟಿ ನೀಡಿದರು. ಆಮ್ ಆದ್ಮಿ ಪಕ್ಷ ಸ್ಥಾಪನಗೊಂಡು ಹತ್ತು ವರ್ಷದ ನೆನಪಿನಲ್ಲಿ ಅಂಬಲಪಾಡಿಯಲ್ಲಿರುವ ಹಿರಿಯ ನಾಗರಿಕರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವೃದ್ಧರಿಗೆ ಕಿರು ಕಾಣಿಕೆ ನೀಡಿದರು. 

ಕಾರ್ಯಕ್ರಮದಲ್ಲಿ ದಿವಾಕರ ಸಾಲಿಯನ್ ಉಡುಪಿ ಅಧ್ಯಕ್ಷರು, ಡಾಲ್ಫಿ ವಿ ಲೂಸ್, ವಿಜಯಾನಂದ  ಪಂಗ್ಲ, ಜೋನ್ ವಾಟರ್, ಜಯರಾಜ್ ಸುಮನ್ ವಿ ಬರ್ಬೋಜಾ,  ಸ್ಟೀಫನ್ ಲೂಸ್, ಎಸ್ ಆರ್ ಲೋಬೊ, ರಮೇಶ್ ಕೋಟ್ಯಾನ್, ಅಶ್ಲೀ ಕಾರ್ನೇಳಿಯೋ, ಕೀರ್ತಿರಾಜ್ ಮತ್ತಿತರರು ಉಪಸ್ಥಿರಿದ್ದರು.