ಮಂಗಳೂರು : ನಗರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭಕೃತ ನಾಮ ಸಂವತ್ಸರ ಪ್ರಾರಂಭಗೊಂಡಿದ್ದು ಇಂದು ಸಂಸ್ಥಾನದ ಪರಮಗುರುಗಳಾದ ಸದ್ಗುರು ಶ್ರೀಮದ್ ಮಾಧವೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯ ತಿಥಿ ಪರ್ವ ದಿನವಾದ ಇಂದು ಶ್ರೀ ಮಠದಲ್ಲಿ ಅಖಂಡ ಭಜನಾ ಸಪ್ತಾಹ ಪ್ರಾರಂಭ ಗೊಂಡಿದ್ದು ಈ ಪ್ರಯುಕ್ತ ಶ್ರೀಗಳವರ ಅಮೃತ ಹಸ್ತಗಳಿಂದ ದೀಪ ಪ್ರಜ್ವಲನೆ ಮುಖಾಂತರ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್, ವೇದಮೂರ್ತಿ ಪಂಡಿತ್ ನರಸಿಂಹ ಆಚಾರ್ಯ , ವೇದಮೂರ್ತಿ ಚಂದ್ರಕಾಂತ್ ಭಟ್, ವೇದಮೂರ್ತಿ ಹರೀಶ್ ಭಟ್ , ವೇದ ಮೂರ್ತಿ ಸುಧಾಕರ್ ಭಟ್ , ವೇದಮೂರ್ತಿಎಚ್ . ಯೋಗೀಶ್ ಭಟ್ ಚಾತುರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್, ಕೋಶಾಧಿಕಾರಿ ಬಿ ಆರ್ ಭಟ್, ಮುಖ್ಯ ಸಂಯೋಜಕ ಸುರೇಶ್ ವಿ ಕಾಮತ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ