ಮಂಗಳೂರು : ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಪ್ರಾರಂಭದಲ್ಲಿ ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ದೇವರ ನಿರ್ಮಾಲ್ಯ ಪೂಜೇಬಳಿಕ ಸಂಸ್ಥಾನದ ದೇವರುಗಳಿಗೆ ಪೂಜಿಸಿದ ನೂಲು ತೊಡಿಸಿದ ಬಳಿಕ ನೆರೆದ ಸಮಾಜ ಬಾಂಧವರಿಗೆ ನೂಲ ಹುಣ್ಣಿಮೆ ( ಋಗುಪಾಕರ್ಮಾ ) ಕಾರ್ಯಕ್ರಮ ಜರಗಿತು . ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್, ಚಾತುರ್ಮಾಸ ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್, ಕೋಶಾಧಿಕಾರಿ ಬಿ ಆರ್ ಭಟ್, ಮುಖ್ಯ ಸಂಯೋಜಕ ಸುರೇಶ್ ವಿ ಕಾಮತ್, ಯು . ಸುದರ್ಶನ್ ಮಲ್ಯ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ