ಮಂಗಳೂರು : ಇಂಡಿಯನ್ ಕೊಂಬೆಟ ಸ್ಪೋರ್ಟ್ಸ್ ಆಕೆಡೆಮಿ ವತಿಯಿಂದ ನಗರದ ಜಿಮ್ ನಲ್ಲಿ ಜುಲೈ 30 ರಂದು ಅಖಿಲ ಭಾರತ ಆಹ್ವಾನಿತ ಸಬ್ ಮಿಷನ್ ಕುಸ್ತಿ ಪಂದ್ಯಾ ಟ ಸ್ಪರ್ಧೆ ನಡೆಯಿತು. ದೇಶ ವಿದೇಶ ಗಳ 40 ಆಹ್ವಾನಿತ ಕುಸ್ತಿಪಟು ಗಳು ಭಾಗ ವಹಿಸಿದ್ದರು. ಸ್ಪರ್ಧಾ ಕೂಟ ವನ್ನು ಕರುಣಾ ಹೋಟೆಲಿನ ಮಾಲಕರಾದ ಕರುಣಾಕರನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕುಸ್ತಿ ಪಂದ್ಯಾಟದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜ ಗೋಪಾಲ್ ರೈ ಯವರ ಮುಂದಾಳತ್ವ ದಲ್ಲಿ ನಡೆದ ಈ ಸ್ಪರ್ಧಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಸಾಯಿ ಬಾಬಾ ರಾವ್, ಲಯನ್ ಚಂದ್ರಹಾಸ್ ಶೆಟ್ಟಿ, ಮಲ್ಲೇಶ್ ಪಾಂಡ್ಯ , ಜಗದೀಶ್ ಶೆeಣವ, ರಾಜೇಶ್ ಶೆಟ್ಟಿ, ಶಿವರಾಂ ಶೆಟ್ಟಿ, ಮೊದಲಾದವರು ಉಪಸ್ಥಿತ ರಿದ್ದರು. ಜಿಮ್ಮಿನ ಮಾಲಕ ಸಚಿನ್ ರಾಜ್ ರೈ , ಸಂಘಟಕ ರಾದ ಬಿಪಿನ್ ರಾಜ್ ರೈ, ಜಿತೇಶ್ ಭಂಜನ್ ,ಗವ್ ತಮ್ ರಾಜ್ ಕುಲಾಲ್ ನೇತೃತ್ವ ವಹಿಸಿದ್ದರು. ತರಬೇತುದಾರ ರಾದ ಕಿರಣ್ ದೇಸಾಯಿ ಹಾಗೂ ಕೀರ್ತಿ ಯವರು ಕುಸ್ತಿ ಸ್ಪರ್ಧೆಯನ್ನು ಯಶಸ್ವಿ ಯಾಗಿ ನಡೆಸಿ ಕೊಟ್ಟರು . ರಷ್ಯಾ ಮತ್ತು ಇಂಗ್ಲೆಂಡ್ ನ ಸ್ಪರ್ಧಿ ಗಳೂ ಸೇರಿದಂತೆ ಆರು ರಾಜ್ಯ ಗಳ 40 ಆಹ್ವಾನಿತ ಕುಸ್ತಿ ಪಟು ಗಳು ಭಾಗ ವಹಿಸಿದ್ದರು. ವಿವಿಧ ದೇಹ ತೂಕದ 5 ಫೈನಲ್ ಪಂದ್ಯ ಗಳಲ್ಲಿ ಮಂಗಳೂರು ತಂಡ ವನ್ನು ಪ್ರತಿನಿಧಿಸಿದ ಜಿಮ್ಮಿನ ನಾಲ್ವರು ಪ್ರಶಸ್ತಿ ಗಳಿಸಿ ಉತ್ತಮ ಸಾಧನೆ ಮಾಡಿದರು. ಮಂಗಳೂರಿನ ಜಿಮ್ಮಿನ ಅಭಿನ್ ಜಯರಾಮ್ ಶೆಟ್ಟಿ, ತ್ರಿಶಾನ್ ಅಮೀನ್, ಚಿರಾಗ್.ಕೆ , ಪ್ರಜ್ವಲ್ ಮಾನ್ವಿ ಪ್ರಶಸ್ತಿ ಗಳಿಸಿ ಕುಸ್ತಿ ಯಲ್ಲಿ ಮಂಗಳೂರಿನ ಪಾರಮ್ಯ ವನ್ನು ಸಾಬೀತು ಪಡಿಸಿದರು. ಇಂಡಿಯನ್ ಕೊಂಬೆಟ ಸ್ಪೋರ್ಟ್ಸ್ ಆಕಾಡೆಮಿಯು ( I. C. S. A.) ಮುಂಬೈ ಮತ್ತು ಮಾಂಗಸರಿಲ್ಲಿ ಶಾಖೆ ಗಳನ್ನು ಹೊಂದಿದ್ದು ,2018 ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ತಂಡದ 11 ಸ್ಪರ್ಧಿ ಗಳಲ್ಲಿ 9 ಸ್ಪರ್ಧಿ ಗಳು ಇಂಡಿಯನ್ ಕೊಂಬೆಟ ಅಕಾಡೆಮಿ ಯವ ರಾಗಿದ್ದು ಮುಂಬರುವ ಬ್ರೆಜಿಲ್ ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸಬ್ ಮಿಷನ್ ರೆಸ್ಲಿಂಗ್ ಕೂಡ ಸೇರ್ಪಡೆ ಯಾಗಿದ್ದು, ಮಂಗಳೂರಿನ ಜಿಮ್ಮಿನ ಕುಸ್ತಿ ಪಟು ಗಳಿಗೆ ಅವಕಾಶ ದೊರೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಉತ್ತಮ ಗುಣಮಟ್ಟದ ತರಬೇತಿಯಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ರಾಜಗೋಪಾಲ್ ರೈ ತಿಳಿಸಿದರು.
