ಸುರತ್ಕಲ್‌ನಲ್ಲಿ ಕೊಲೆಗೀಡಾದ ಫಾಜಿಲ್ ಕೊಲೆಯ ಆರೋಪದ ಮೇಲೆ ಏಳು ಜನರನ್ನು ಪೋಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ಪೋಲೀಸು ಕಮಿಶನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. 

ಮೊನ್ನೆಯೇ ಕಾರು ಮಾಲಿಕ ಅಜಿತ್ ಕ್ರಾಸ್ತಾರನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿಯ ಮೇಲೆ ಮತ್ತೆ ಆರು ಜನರನ್ನು ಬಂಧಿಸಲಾಗಿದೆ. ಸುಹಾಸ್ ಶೆಟ್ಟಿ ಇಲ್ಲವೇ ಸುನಿಲ್ ಶೆಟ್ಟಿ, ಮೋಹನ್, ಗಿರಿಧರ್, ಅಭಿಷೇಕ್, ಶ್ರೀನಿವಾಸ, ದೀಕ್ಷಿತ್ ಬಂಧಿತರು. 

ಡಿಸಿಪಿಗಳಾದ ಅಂಶುಕುಮಾರ್,  ದಿನೇಶ್ ಕುಮಾರ್, ಎಸಿಪಿ ಮಹೇಶ್ ಕುಮಾರ್, ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ತಂಡಗಳು ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿದರು.