ಮೂಡುಬಿದಿರೆ: ಧರ್ಮಬಂಧು, ಅಕ್ಷಯ ಕುಮಾರ್ ಮೂಡುಬಿದಿರೆ, ನಿವೃತ್ತ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್ ಅವರು ಡಿ. 28 ರಂದು ರವಿವಾರ ಮುಂಜಾನೆ ಮಂಗಳೂರುನಲ್ಲಿ ನಿಧನ ಹೊಂದಿದ್ದರು. ಅವರ ಗತ್ಯಾಭಿಷೇಕ ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯಲ್ಲಿ ಜ. 16 ರಂದು ಬೆಳಿಗ್ಗೆ 216 ಕಲಶ ಅಭಿಷೇಕ ಮಧ್ಯಾಹ್ನ ಧಾರ್ಮಿಕ ಸಭೆ ಜಗದ್ಗುರು ಡಾ ||ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನಮಠ ಸ್ವಸ್ತಿಶ್ರೀ ಭಟ್ಟಾರಕ ನಗರ, ಮೂಡುಬಿದಿರೆ, ಹಾಗೂ ಕ್ಷುಲ್ಲಕ ಪ್ರಗ್ಯಾನ್ ಸಾಗರ ಸ್ವಾಮೀಜಿ ಸಾನಿಧ್ಯದಲ್ಲಿ ನೆರವೇರಿತು. ಮಂಗಳಾಚರಣೆ ಕ್ಷುಲ್ಲಕ ಸ್ವಾಮೀಜಿ ಮಾಡಿದರು.
ಮೂಡುಬಿದಿರೆ ಸ್ವಾಮೀಜಿ ಆಶೀರ್ವಾದ ನೀಡಿ ಆತ್ಮ ಅಜರಾಮರ ಶರೀರ ನಶ್ವರ ಶ್ರೀಯುತರು 8.03.1948 ರಂದು ಹುಟ್ಟಿದ ಇವರು ಕೃಷಿಯಲ್ಲಿ ಯಂ.ಯಸ್ಸಿ ಸ್ನಾತಕೋತ್ತರ ಶಿಕ್ಷಣ ಪಡೆದುಕೊಂಡು ಕೆನರಾ ಬ್ಯಾಂಕ್ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಶಿಬ್ಬಂದಿ ಗಳ ಗೌರವಾದರಗಳಿಗೆ ಪಾತ್ರರಾದವರು ನಿವೃತ್ತಿ ಹೊಂದಿದ್ದರು.
ಮೃದು ಮಧುರ ಭಾಷಿ ಸ್ನೇಹಪ್ರಿಯ ವ್ಯೆಕ್ತಿತ್ವದವರು ಧಾರ್ಮಿಕ ಕಾರ್ಯಗಳ ಬಗ್ಗೆ ತುಂಬಾ ಆಸಕ್ತಿಯುಳ್ಳವರಾಗಿದ್ದರು. ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿವಿಧ ತೀರ್ಥಕ್ಷೇತ್ರಗಳ ದರ್ಶನ ಮಾಡುತ್ತಿದ್ದರು.
ಶ್ರೀ ಮಠದ ಭಕ್ತರಾಗಿದ್ದು ಧರ್ಮ ಚರ್ಚೆ ನಡೆಸುತ್ತಿದ್ದರು. ಶ್ರೀಯುತ ರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆಯಿಂದ ಆಗಿರುವ ದುಃಖ್ಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಜಿನೇಶ್ವರರು, ಜಿನಶಾಸನ ದೇವತೆಗಳು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಆಶೀರ್ವಾದದಲ್ಲಿ ಸ್ವಾಮೀಜಿ ತಿಳಿಸಿ, ಸಾಮೂಹಿಕ ನಮೋಕಾರ ಮಂತ್ರ ಪಠಿಸಿದರು ಪುತ್ರರಾದ ಅವಿನಾಶ್, ವಿಕಾಸ್ ರಾಜಾವರ್ಮ ಬಲ್ಲಾಳ್, ಅಭಯಚಂದ್ರ ಜೈನ್ ಸೇರಿದಂತೆ ಅಕ್ಷಯ್ ಕುಮಾರ್ ರ ಆಪಾರ ಬಂಧು ಬಳಗದವರು ಉಪಸ್ಥಿತರಿದ್ದರು. ಬಳಿಕ ಭಗವಾನ್ ಚಂದ್ರಪ್ರಭಸ್ವಾಮಿ ಮಹಾಮಂಗಳಾರತಿ, ಸ್ವಾಮೀಜಿ ಧ್ವಯರಪಾದ ಪೂಜೆ ನೆರವೇರಿತು.
ಶ್ರೀ ಶ್ರೀಧರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.