ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯ ಎಂದು ಪ್ರಸಿದ್ದವಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೂಟಗೂಡಿ, ಶಿಗ್ಗಾವಿ ತಾಲೂಕು ಹಾವೇರಿ ಜಿಲ್ಲೆ ಇದರ ಕುಲಪತಿ ಡಾ. ಟಿ. ಎಂ ಭಾಸ್ಕರ್ ರವರು ಅಹ್ವಾನ ಮಾಡಿ ಜನವರಿ 21 ರಂದು ಅಪರಾಹ್ನ 3.00 ಗಂಟೆಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರಿಗೆ ವಸ್ತು ಸಂಗ್ರಹಾಲಯ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಈ ಸಂಧರ್ಭ ವಿಶ್ವವಿದ್ಯಾಲಯದ ಅಧ್ಯಾಪಕ ವೃoದದವರಾದ ಡಾ. ಪ್ರೇಮ್ ಕುಮಾರ್, ಡಾ. ವೆಂಕನ್ ಗೌಡ, ಡಾ. ರಾಜಶೇಖರ್, ಷಹಾಜನ್ ಮುದಕವಿ, ಅಸಿಸ್ಟೆಂಟ್ ಪ್ರೋ ಭುವನ್ ಅಕ್ಕೋಳೆ ಇದ್ದರು ಹಾಗೂ ಸ್ವಾಮೀಜಿ ಜತೆಗೆ ಸೋಮಶೇಖರ್, ಪ್ರಮೋದ್ ಎಸ್ ಡಿ ಯಂ ಉಜಿರೆ ಕಾಲೇಜು ಪ್ರಾಂಶುಪಾಲರು, ಮೂಡುಬಿದಿರೆ ಲೆಕ್ಚರ್ ಮಹಾವೀರ ಜೈನ್ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಮದಲ್ಲಿ ರಾಜ್ಯಮಟ್ಟದ ಜಾನಪದ ಕಮ್ಮಟ ಹಮ್ಮಿಕೊಳ್ಳಲು ಸ್ವಾಮೀಜಿ ಕುಲಪತಿಗಳೊಂದಿಗೆ ಚರ್ಚಿಸಿದರು. ವಿಶ್ವವಿದ್ಯಾಲಯ ವತಿಯಿಂದ ಪೂಜ್ಯ ಸ್ವಾಮೀಜಿಯವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.