ಮೂಡಬಿದಿರೆ:  ಶ್ರೀದೇವಿ ನೃತ್ಯ ಕೇಂದ್ರ ಮಂಗಳೂರು ಹಾಗೂ ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಮೂಡಬಿದಿರೆ. ಶ್ರೀ ದಿಗಂಬರ ಜೈನಮಠ ಸಹಯೋಗದಲ್ಲಿ ಜ.5 ರಂದು ಬೆಳಿಗ್ಗೆ 10 ಗಂಟೆಗೆ ಜಗದ್ಗುರು ಡಾ. ಸ್ವಸ್ತಿಶ್ರೀ  ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನಮಠ ಮೂಡುಬಿದಿರೆಯವರು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿದರು. ಆಶೀರ್ವಾದ ನೀಡಿದ ಸ್ವಾಮೀಜಿ "ನೃತ್ಯ ಕಲೆಯು ಭಾರತೀಯ ಪ್ರಾಚೀನ ಎಪ್ಪತ್ತೆರಡು ಕಲೆ (64ಕಲೆ ಅಂತ ಲೊ ಹೇಳುತ್ತಾರೆ ) ಗಳಲ್ಲಿ ಒಂದು ಶಾಸ್ತ್ರೀಯ ನೃತ್ಯ ಅಧಿನಾಥ ತೀರ್ಥoಕರ ಕಾಲದಲ್ಲೇ ಆರಾಧನ ಪದ್ಧತಿಯಾಗಿ ರಾಜರ ಆಸ್ಥಾನದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಅಂಗಿಕ ಅಭಿನಯ ಮುದ್ರೆ ಹೆಜ್ಜೆ,ಗಳ ಶಾಸ್ತ್ರೀಯ ಪಟ್ಟುಗಳನ್ನು ಕಲಿತ ನೃತ್ಯಗಾರರು ತಮ್ಮ ಗುರು ಗಳಿಂದ ಅಭ್ಯಾಸಕಾಲದಲ್ಲಿ ನವರಸಗಳ  ಪ್ರಾಮುಖ್ಯತೆ, ಸೌಂದರ್ಯ ಪ್ರಜ್ಞೆ ಶಾಂತ ರಸ ಭಕ್ತಿ ಜ್ಞಾನ ರಸಗಳ ಸೌಂದರ್ಯದ ಮಹತ್ವ ತಿಳಿದು ಪ್ರೇಕ್ಷಕ ವರ್ಗಕ್ಕೆ ನೃತ್ಯ ಅಭಿನಯ ಮೂಲಕ ತಿಳಿಸಿದಾಗ ಭಾರತಿಯ ಕಲೆಯ ಮಹತ್ವ ತಿಳಿಯುದು ಹಾಗೂ ಉತ್ತಮ ಕಲಾ ಪ್ರಜ್ಞೆ ಮೂಡಿಸಲು ಸಾಧ್ಯ"ಎಂದು ನುಡಿದರು. 

ಸ್ಥಾಪಕ ಟ್ರಸ್ಟಿ ಶ್ರೀಯುತ  ಡಾ.ಹರಿಕೃಷ್ಣ ಪುನರೂರು  ಅಧ್ಯಕ್ಷತೆ ವಹಿಸಿ ಶ್ರೀ ಮಠ ಕಲೆ ಸಾಹಿತ್ಯ ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುದು ಸಂತೋಷ ಎಂದರು.  ಗೌರವ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಟ್ರಸ್ಟಿ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ 'ಸುಸಂಸ್ಕೃತಿಯನ್ನು ತೋರಿಸಲ್ಪಡುವ ಏಕೈಕ ವಿದ್ಯೆ  ಶಾಸ್ತ್ರೀಯ ನೃತ್ಯ' ಎಂದು ತಿಳಿಸಿದರು. ಶ್ರೀಯುತ  ಭುವನಾಭಿರಾಮ  ಉಡುಪ  ಯುಗಪುರುಷದ ಸಂಪಾದಕರು  ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕರಾದಂತಹ ಡಾ. ಆರತಿ ಶೆಟ್ಟಿ  ಪ್ರಸ್ತಾವಿಕ ಮಾತುಗಳನ್ನಾಡಿದರು. ಹಾಗೂ  ಸಾತ್ವಿಕ. ರೈ ಪ್ರಾರ್ಥನೆಯನ್ನು ಮಾಡಿದರು. ಟ್ರಸ್ಟಿ ಮಿಥುನ್ ರೈ ಅತಿಥಿ ಅಭ್ಯಾಗತರನ್ನು  ಸ್ವಾಗತಿಸಿದರು. ಟ್ರಸ್ಟಿ ಹರೀಶ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ವಿದುಷಿ ನಯನ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ  ಮೂವತ್ತು ನಿಮಿಷ ಭರತನಾಟ್ಯ ಕಾರ್ಯಕ್ರಮ  ಪ್ರಸ್ತುತ ಪಡಿಸಲಾಯಿತು.