ಮೂಡುಬಿದಿರೆ: ಕೊಣಾಜೆಯ ಮಂಗಳಗಂಗೋತ್ರಿಯ ಆವರಣದಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಸಾಂಸ್ಕೃತಿಕ ಸ್ಫರ್ಧೆ ‘ವೇವ್ಸ್ 2025ರಲ್ಲಿ ಸಂಗೀತ, ರಂಗಕಲೆ, ನೃತ್ಯ, ಹಾಗೂ ಸಾಹಿತ್ಯ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು, ಎಲ್ಲಾ ಐದು ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ಮೆರೆದು ಸತತ 24 ವರ್ಷ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಒಟ್ಟು ನಡೆದ 27 ಸ್ಪರ್ಧೆಗಳಲ್ಲಿ 16 ಪ್ರಥಮ ಸ್ಥಾನ, 5 ದ್ವಿತೀಯ ಸ್ಥಾನ ಹಾಗೂ 1 ತೃತೀಯ ಸ್ಥಾನದೊಂದಿಗೆ ಒಟ್ಟು 22 ಸ್ಥಾನಗಳಲ್ಲಿ ಪ್ರಶಸ್ತಿಯನ್ನು ಗಳಿಸಿ ಈ ಸಾಧನೆ ಮೆರೆದಿದೆ.

ಪ್ರಥಮ ಸ್ಥಾನ: ಹಿಂದಿ ಭಾಷಣ-ವಿನಿಟ್ ವಾಝ್ (ಪ್ರಥಮ), ಇಂಗ್ಲೀಷ್ ಚರ್ಚೆ- ವೈಭವ್ ಯು ಹಾಗೂ ಸಾತ್ವಿಕ್ ಸುವರ್ಣ ( ಪ್ರಥಮ), ಹಿಂದಿ ಚರ್ಚೆ- ವೈಭವ್ ಯು ಹಾಗೂ ವಿನಿಟ್ ವಾಝ್ (ಪ್ರಥಮ), ಏಕಾಂಕ ನಾಟಕ (ಪ್ರಥಮ), ಕಿರು ಪ್ರಹಸನ (ಪ್ರಥಮ), ಕ್ಲೇ ಮಾಡೆಲಿಂಗ್- ಶ್ರೀಧರ್ (ಪ್ರಥಮ), ಶಾಸ್ತ್ರೀಯ ಸಂಗೀತ ವೈಯಕ್ತಿಕ- ಆಶ್ವೀಜಾ ಉಡುಪ(ಪ್ರಥಮ), ನಾನ್ ಪರ್ಕಶನ್- ಸ್ವಯಂ ಪ್ರಕಾಶ್ ಪ್ರಭು (ಪ್ರಥಮ), ಲಘು ಸಂಗೀತ- ವೀಕ್ಷಣ್ (ಪ್ರಥಮ), ಪಾಶ್ಚತ್ಯ ಗುಂಪು ಗಾಯನ-(ಪ್ರಥಮ), ಭಾರತೀಯ ಗುಂಪು ಗಾಯನ-(ಪ್ರಥಮ), ಜನಪದ ವಾದ್ಯ ಮೇಳ-(ಪ್ರಥಮ), ಪಾಶ್ಚತ್ಯ ವಾದ್ಯ ಸಂಗೀತ ವೈಯಕ್ತಿಕ- ಜೋಶುವಾ (ಪ್ರಥಮ), ಜನಪದ ನ್ಯತ್ಯ ಗುಂಪು- (ಪ್ರಥಮ), ಶಾಸ್ತ್ರೀಯ ನೃತ್ಯ- ಅನುಪ್ರಿಯಾ- (ಪ್ರಥಮ), ಸೃಜನಾತ್ಮಕ ನೃತ್ಯ ಗುಂಪು -(ಪ್ರಥಮ) ಸ್ಥಾನ ಪಡೆದರು.
ದ್ವಿತೀಯ ಸ್ಥಾನ: ಪೋಸ್ಟರ್ ಮೇಕಿಂಗ್- ಮಹೇಶ್ – (ದ್ವಿತೀಯ), ಇಂಗ್ಲೀಷ್ ಚರ್ಚೆ- ಸಾತ್ವಿಕ್ ಸುವರ್ಣ –(ದ್ವಿತೀಯ), ಪಾಶ್ಚತ್ಯ ಏಕವ್ಯಕ್ತಿ ಗಾಯನ- ಲೆನಿಷಾ (ದ್ವಿತೀಯ), ಚರ್ಮ ವಾದ್ಯ ವೈಯಕ್ತಿಕ- ಮನೋಜ್ ಬೇಗೂರ್ (ದ್ವಿತೀಯ), ಮಿಮಿಕ್ರಿ- ಸಮನ್ವಿತ್- (ದ್ವಿತೀಯ) ಸ್ಥಾನ ಪಡೆದರು. ತೃತೀಯ ಸ್ಥಾನ: ಮೈಮ್ ತೃತೀಯ ಸ್ಥಾನ ಪಡೆದರು.
ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.