ಕಲಬುರಗಿ ಬಳಿಯ ಶರಣಸಿರಸಗಿ ಗ್ರಾಮದ ಬಳಿ ನಡೆದ ಸರಣಿ ಅಪಘಾತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಣ್ಣ ತಂಗಿ ಮೃತರಾಗಿದ್ದಾರೆ.
ಮೊದಲು ಟೆಂಪೋ ಬೈಕ್‌ಗೆ ಗುದ್ದಿದೆ. ಟೆಂಪೋದವನು ಗಾಬರಿಗೊಂಡು ತಿರುಗಿದಾಗ ಬಂದ ಕಾರಿಗೆ ಗುದ್ದಿದೆ. ಕಾರು, ಟೆಂಪೋಗಳು ಉರುಳಿ ತಗ್ಗಿಗೆ ಬಿದ್ದಿವೆ.
ಬೈಕ್‌ನಲ್ಲಿದ್ದ 29ರ ಅಜಯ್ ರೋಡಗಿ ಮತ್ತು 27ರ ಪ್ರೇಮಾ ಪ್ರವೀಣ್ ಸ್ಥಳದಲ್ಲೇ ಸಾವಪ್ಪಿದ್ದಾರೆ. ಇವರು ಅಣ್ಣ ತಮ್ಮಂದಿರ ಮಕ್ಕಳು. ಅಫಜಲಪುರ ತಾಲೂಕಿನವರು. ಕಲಬುರಗಿಯಿಂದ ಊರತ್ತ ಹೊರಟಿದ್ದರು.