ನನ್ನ ವಿರುದ್ಧ ದೇಶದ ಯಾವುದೇ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಆದರೆ ಹಾಗೆಂದು ಶಾಸಕ ಸುನಿಲ್ ಕುಮಾರ್ ಮತ್ತು ಬಿಜೆಪಿ ನಾಯಕರು ಸುಳ್ಳು ಹೇಳಿರುವುದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರಾಧಾಕೃಷ್ಣ ಹಿರ್ಗಾನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನನ್ನ ಜಾಲತಾಣ ಪೋಸ್ಟ್ ಬಗೆಗೆ ದೂರು ಬಂದಾಗ, ಕಾರ್ಕಳ ಠಾಣೆಗೆ ಹಾಜರಾಗಿದ್ದೇನೆ. ಮೂರ್ನಾಲ್ಕು ಬಾರಿ ಹಾಜರಾದಾಗಲೂ ಸಹಿ ಮಾಡಿದ್ದೇನೆ. ನಾನು ತಲೆಮರೆಸಿಕೊಂಡಿರುವೆ ಎಂದೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸುಳ್ಳು ಹೇಳಿದ್ದಾರೆ ಎಂದು ಸಹ ಹಿರ್ಗಾನ ಹೇಳಿದರು.
ಕಾರ್ಕಳ ಎಸ್‌ಐ ಮಧು ಅವರು ರಾಧಾಕೃಷ್ಣ ಹಿರ್ಗಾನ ಮೇಲೆ ಹಲ್ಲೆ ಮಾಡಿರುವರು ಎಂದು ದೂರು ಇದೆ.