ಮೂಡುಬಿದಿರೆ: ಭಾರತ ದೇಶ ಮಾತ್ರವಲ್ಲದೇ ಇಡೀ ಜಗತ್ತಿಗೆ ಡ್ರಗ್ಸ್ ಅತ್ಯಂತ ಅಪಾಯಕಾರಿ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇಂದಿನ ಯುವಕರು, ವಿದ್ಯಾರ್ಥಿಗಳು ನಶೆಗಾಗಿ ಸೇವನೆ ಮಾಡುವುದರಿಂದ ತಮ್ಮ ಜೀವನವನ್ನು ತಾವೇ ಹಾಳು ಮಾಡುಕೊಳ್ಳುತ್ತಿದ್ದಾರೆ. ಭಾರತದ ಶಕ್ತಿಯೇ ಯುವಕರು. ದೇಶದ ಯುವಶಕ್ತಿಯನ್ನು ಡ್ರಗ್ಸ್ ಮುಕ್ತರನ್ನಾಗಿಸಲು ಎಲ್ಲರೂ ಕೈ ಜೋಡಿಸಿಬೇಕು  ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು .

ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಮಾಜಕಾರ್ಯ ವಿಭಾಗದ ‘ರಜತ ಮಹೋತ್ಸವ'ದ ಅಂಗವಾಗಿ ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಿಂದ ಮೂಡುಬಿದಿರೆ ತಾಲೂಕು ಕಚೇರಿಯವರೆಗೆ ಮಂಗಳವಾರ ನಡೆದ "ಮಾದಕ- ದ್ರವ್ಯ ವಿರೋಧಿ ಜಾಗೃತಿ ಜಾಥಾ" ದಲ್ಲಿ ಪಾಲ್ಗೊಂಡು ಮಾತನಾಡಿದರು.  

ಮೂಡುಬಿದಿರೆಯ ವಿವಿಧ ಕಾಲೇಜು ಮತ್ತು ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ ಜಾಥಾ ನಿರ್ಮಿಸಲು ನಡೆಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾದಲ್ಲಿ ಕಾಲ್ನಡಿಗೆಯ ಮೂಲಕ ಪಾಲ್ಗೊಂಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಡ್ರಗ್ಸ್‍ನಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ದೂರವಿದ್ದು ಡ್ರಗ್ಸ್ ಸೇವನೆ ಮಾಡುವವರನ್ನು ವಿರೋಧಿಸಬೇಕು ಎಂದು ತಿಳಿಸಿದರು.

ಮೂಡುಬಿದಿರೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸಿ, ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸಲು ಮುಂದಾದ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗವನ್ನು ಶ್ಲಾಘಿಸಿದರು. ಮೂಡುಬಿದಿರೆ ಶಿಕ್ಷಣ ಕಾಶಿ ಎಂದೇ ಹೆಸರುವಾಸಿ. ನಗರದಲ್ಲಿ 50,000 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದರೆ. ಆ ಹಿನ್ನಲೆಯಲ್ಲಿ, ಡ್ರಗ್ಸ್ ಮುಕ್ತ ದೇಶವನ್ನು ನಿರ್ಮಿಸುವಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಪೆÇಲೀಸ್ ಇಲಾಖೆಯವರೊಂದಿಗೆ ಸಹಕರಿಸಬೇಕು ಎಂದರು.  

ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್, ಮಾದಕದ್ರವ್ಯದಿಂದ ಎಲ್ಲಾ ನಗರಗಳು ಹೆಚ್ಚೆಚ್ಚು ಮಾಲಿನ್ಯಗೊಳ್ಳುತ್ತಿದ್ದು, ಸಾಧ್ಯವಾದಷ್ಟು ಯುವಕರು, ವಿದ್ಯಾರ್ಥಿಗಳು ಡ್ರಗ್ಸ್ ಸೇವನೆಯಿಂದ ದೂರ ಸರಯಬೇಕು. ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತಾ ಡ್ರಗ್ಸ್ ಮುಕ್ತ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಬೇಕು ಎಂದರು. 

ಜಾಥಾದಲ್ಲಿ ಆಳ್ವಾಸ್ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಬಿಬಿಎ, ಬಿ.ಎಸ್ಸಿ, ಬಿಕಾಂ, ಬಿಸಿಎ, ಎಂ.ಎಸ್ಸಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ, ಆಳ್ವಾಸ್ ನಸಿರ್ಂಗ್ ಮತ್ತು ಧವಳ ಕಾಲೇಜಿನ ಒಟ್ಟು 400ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು.   ಕಾರ್ಯಕ್ರಮ ಸಂಯೋಜಕಿ ಡಾ ಸಪ್ನಾ ಆಳ್ವ, ಪ್ರಾಧ್ಯಪಕ ವೃಂದದವರು ಭಾಗಿಯಾಗಿದ್ದರು.