ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏಪ್ರಿಲ್ 28 ರಿಂದ ಏಪ್ರಿಲ್ 29 ರ ವರೆಗೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ಶ್ರೀ ವಿಷ್ಣು ಅಸ್ರ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ ಏಕಾಹ ಭಜನೆ ಜರಗಲಿರುವುದು. ಏಪ್ರಿಲ್ 28 ನೇ ಸೋಮವಾರದಂದು ಪ್ರಾತಃ ಕಾಲ 6.13 ವಿಶ್ವ ಹಿಂದೂ ಪರಿಷತ್, ಮಂಗಳೂರು ಅಧ್ಯಕ್ಷರಾದ ಹೆಚ್.ಕೆ. ಪುರುಷೋತ್ತಮ ದೀಪ ಬೆಳಗಿಸುವುದರ ಮೂಲಕ ಏಕಾಹ ಭಜನೆಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ವಿವಿಧ ಭಜನಾತಂಡಗಳು ಭಜನಾ ಸೇವೆ ನೀಡಲಿದ್ದಾರೆ.
ತಾರೀಕು ಏಪ್ರಿಲ್ 29 ರ ಪ್ರಾತಃಕಾಲ 6.13ಕ್ಕೆ ಭಜನಾ ಮಂಗಲೋತ್ಸವ ನಡೆಯಲಿದೆ. ನಂತರ ವಿಶೇಷ ಸೀಯಾಳಾಭಿಷೇಕ, ಪಂಚಾಮೃತಾಭಿಷೇಕ, ಶ್ರೀ ಗಣಪತಿ ಹವನ, ಚಂಡಿಕಾ ಹವನ ನಡೆಯಲಿದೆ. ಮದ್ಯಾಹ್ನ 11.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿಯ ನಂತರ ಮದ್ಯಾಹ್ನದ ಮಹಾಪೂಜೆ ನಡೆದು ಪ್ರಸಾದ ಭೋಜನ ನಡೆಯಲಿದೆ. ಸಂಜೆ 5.00 ರಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮವನ್ನು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಮ್. ಬಿ. ಪುರಾಣಿಕ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಕೆ.ಸಿ.ನಾೈಕ್ ವಹಿಸಲಿದ್ದಾರೆ. ರಾತ್ರಿ 8.00ಕ್ಕೆ ಮಹಾಪೂಜೆ, ಶ್ರೀ ದೇವರಿಗೆ ರಂಗ ಪೂಜೆ ಜರುಗಿ ಪ್ರಸಾದ ವಿತರಣೆ ನಡೆಯಲಿದೆ.
ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ - ಲೋಕ ಕಲ್ಯಾಣಾರ್ಥವಾಗಿ 108 ಭಕ್ತಾದಿಗಳಿಂದ ಏಪ್ರಿಲ್ 29 ರಂದು ಸಂಜೆ 5 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ ಆಸಕ್ತ ಭಕ್ತಾದಿಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಆಸಕ್ತರು ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸುವಂತೆ ವಿನಂತಿ. ಸಂಪರ್ಕ ಸಂಖ್ಯೆ 8971366902.
ಈ ಎಲ್ಲಾ ಮಾಹಿತಿಯನ್ನು ತಮ್ಮ ಮಾಧ್ಯಮದಲ್ಲಿ ಪ್ರಕಟಿಸಿ ಹೆಚ್ಚಿನ ಸಂಖ್ಯೆಯ ಭಗವದ್ಭಕ್ತರಿಗೆ ತಿಳಿಸುವಂತೆ ಹಾಗೂ ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.